ಬ್ರೇಕಪ್ ಎನ್ನುವುದು ಇಬ್ಬರ ವ್ಯಕ್ತಿಗಳ ಮಧ್ಯೆಯೇ ಸಂಭವಿಸಬೇಕೆಂದೇನಿಲ್ಲ. ಬ್ರೇಕಪ್ ಎನ್ನುವುದು ನಾವು ಮತ್ತು ನಮ್ಮ ನಂಬಿಕೆಯ ಮಧ್ಯೆಯೂ ಸಂಭವಿಸಬಹುದು ಎಂಬ ಮುನ್ನುಡಿಯ ಮಾತು ಬಹಳ ಸೊಗಸಾಗಿದೆ. ಸತತವಾಗಿ ನಮ್ಮ ಸುತ್ತ ನಾವೇ ಹಾಕಿಕೊಂಡಿರುವ ಬೇಲಿಗಳ ಜೊತೆ ಬ್ರೇಕಪ್ ಮಾಡಿಕೊಳ್ಳುತ್ತಾ ಸಾಗುವುದೇ ಜೀವನ. “ನನ್ನನ್ನು ಬಿಟ್ಟಮೇಲೆ ಅವಳಿಗೆ ನನ್ನೆದುರು ಏನನ್ನೂ ಸಾಬೀತು ಮಾಡುವ ಅವಶ್ಯಕತೆಯೂ ಇಲ್ಲ. ಅವಳಿಗೆ ಎರಡು ಜಡಿಮಳೆಗಳ ಮಧ್ಯೆ ಒಂದು ಸಾದಾ ಖಾಲಿತನ ಬೇಕಿತ್ತು, ಅದು ನಾನಾದೆ. ಅವಳು ಬರುವ ಮುಂಚೆಯೂ ಖಾಲಿ, ಜೊತೆಗಿದ್ದಾಗಲೂ ಖಾಲಿ, ಇನ್ನು ಮುಂದೆಯೂ ಖಾಲಿ" (ಕೃತಿಯ ಆಯ್ದ ಭಾಗ)
©2025 Book Brahma Private Limited.