ಲೇಖಕಿ ಚೈತ್ರಿಕಾ ಹೆಗಡೆಯವರ ‘ನೀಲಿ ಬಣ್ಣದ ಸ್ಕಾರ್ಫು’ ಹನ್ನೆರಡು ಕಥೆಗಳನ್ನು ಒಳಗೊಂಡಿರುವ ಕಥಾ ಸಂಕಲನವಾಗಿದೆ. ಸಾಹಿತಿ ಸುಬ್ರಾಯ ಚೊಕ್ಕಾಡಿ ಈ ಕಥಾ ಸಂಕಲನಕ್ಕೆ ಮುನ್ನುಡಿ ಬರೆದಿದ್ದಾರೆ.
ಸಮನ್ವಿತಾ ಪ್ರಕಾಶನದ ರಾಧಾಕೃಷ್ಣ ಅವರು,‘ ಈ ಸಂಕಲನದ ಹನ್ನೆರಡು ಕಥೆಗಳದೂವಿಭಿನ್ನ ಲೋಕ. ಇಲ್ಲಿನ ಕಥೆಗಳಲ್ಲಿ ಬೋಧನೆಯಿಲ್ಲ.ತೀರ್ಪುಗಳ ಹೇರಿಕೆಯಿಲ್ಲ. ಕಥೆಗಾರ್ತಿಯ ನಿರ್ಲಿಪ್ತತೆ ಇಡೀ ಕಥೆಯ ಓಘವನ್ನು ಸಾಕ್ಷಿಭಾವದಲ್ಲಿ ತೆರೆದಿಡುತ್ತದೆ. ಪ್ರತಿ ಕಥೆಯೂ ಸಹ ಅಂತ್ಯದ ತಿರುವಿನಲ್ಲಿ ಕಥೆಯ ಅನಂತ ಸಾಧ್ಯತೆಗಳನ್ನು ಎದುರಾಗಿಸುತ್ತದೆ. ಇವು ಓದುಗನದೇ ಕಥೆಯಾಗಿ ವಿಸ್ತಾರ ಹೊಂದುವ ಸಾಧ್ಯತೆ ಇಲ್ಲದ್ದಿಲ್ಲ. ಇಲ್ಲಿನ ಕತೆಗಳು ತಾವೇ ತಾವಾಗಿ ದೇಶಕಾಲದ ಚೌಕಟ್ಟನ್ನು ಒದಗಿಸುತ್ತಾ ಓದುಗರಿಗೆ ಏಕಕಾಲದಲ್ಲಿ ಕಥೆ ಓದುವ ಮತ್ತು ಕಥಾ ಚಿತ್ರವನ್ನು ನೋಡುವ ಶೈಲಿಯಲ್ಲಿದೆ. ಕಥೆಗಳ ಕಥನದಲ್ಲಿ ಹವಿಗನ್ನಡದ ಸವಿಯುಮನಸಿಗೆ ಮುದ ನೀಡುತ್ತಿದೆ ಎಂದಿದ್ದಾರೆ.
©2024 Book Brahma Private Limited.