ಬಿ.ಎಸ್. ರುಕ್ಕಮ್ಮ ಅವರ ಮಕ್ಕಳ ಕತೆಗಳ ಸಂಕಲನ ಕೃತಿ ʻಪಂಚಾಮೃತʼ. ಎನ್. ಪ್ರಹ್ಲಾದ ರಾವ, ಪ.ವಿ. ಚಂದ್ರಶೇಖರ ಸೇರಿದಂತೆ ವಿವಿಧ ಲೇಖಕರು ಬರೆದ ಒಟ್ಟು ಹತ್ತು ಕತೆಗಳನ್ನು ಪ್ರಸ್ತುತ ಪುಸ್ತಕ ಒಳಗೊಂಡಿದೆ. ಅತ್ತೆ-ಸೊಸೆ ಜಗಳ, ಮೂರ್ಖತನ, ಮದುವೆ ಮುಂತಾದ ಲಘು ಕತೆಗಳೊಂದಿಗೆ ಚಿತ್ರದುರ್ಗದ ಕೋಟೆಗೆ ಸಂಬಂಧಿಸಿದ ಚಾರಿತ್ರಿಕ ಮತ್ತು ಜಾನಪದದ ದೀರ್ಘ ಕತೆಗಳು, ಹಕ್ಕಿಗಳ ಬಗೆಗಿನ ಕುತೂಹಲಕಾರಿ ಸಂಗತಿಗಳನ್ನೂ ಇಲ್ಲಿನ ಕತೆಗಳು ಹೇಳುತ್ತವೆ. ಪರಿವಿಡಿಯಲ್ಲಿ ಜಾಣರು ತೋಡಿದ ಬಾವಿ, ಶ್ರೀಮಂತೆ ಆರಿಸಿಕೊಂಡ ಹುಡುಗಿ, ಮಳೆರಾಯನ ಗುಟ್ಟು, ಪೂರ್ಣಿಮಾ ಚಂದ್ರಲೋಕಕ್ಕೆ ಹೋದದ್ದು, ಸಿಗಡಿ ಯಾಕೆ ಒಣಗಲಿಲ್ಲ?, ಮೇಲುದುರ್ಗದ ನೋಟ, ಮಿಂಚುಳ್ಳಿ, ಆಡಿನ ಆಟ, ಹಾಗೂ ತೋಳ ಮತ್ತು ತುಂಟಿ ಶೀರ್ಷಿಕೆಗಳ ಕತೆಗಳಿವೆ.
©2025 Book Brahma Private Limited.