ನೀಳಾದೇವಿಯವರ ಸಮಗ್ರ ಕಥೆಗಳು

Author : ನೀಳಾದೇವಿ

Pages 560

₹ 350.00




Year of Publication: 2013
Published by: ಸಾಹಿತ್ಯ ನಂದನ
Address: ನಂ.9. 4ನೇ ಇ ವಿಭಾಗ, 10ನೇ ಎ ಮುಖ್ಯರಸ್ತೆ, ರಾಜಾಜಿನಗರ, ಬೆಂಗಳೂರು-560010

Synopsys

‘ನೀಳಾದೇವಿಯವರ ಸಮಗ್ರ ಕಥೆಗಳು’ ಸುಮಾರು ಐದು ದಶಕಗಳಿಂದ ತಮ್ಮ ಬರಹದ ಪ್ರತಿಭೆಯ ಮೂಲಕ ಜನಪ್ರಿಯವಾಗಿರುವ ಶ್ರೀಮತಿ ನೀಳಾದೇವಿಯವರು ಕನ್ನಡದ ಸಾರಸ್ವತ ಲೋಕದಲ್ಲಿ ಭದ್ರವಾದ ಸ್ಥಾನವನ್ನು ಗಳಿಸಿಕೊಂಡ ಕೆಲವೇ ಲೇಖಕಿಯರಲ್ಲಿ ಒಬ್ಬರು. ಇವರ ಅನೇಕ ಕಥೆಗಳು, ಕಾದಂಬರಿಗಳು ಕನ್ನಡದ ಜನಪ್ರಿಯ ಪತ್ರಿಕೆಗಳಾದ ಕಸ್ತೂರಿ, ಸುಧಾ, ತರಂಗ, ಮಯೂರ, ಕರ್ಮವೀರ, ಉದಯವಾಣಿ, ಪ್ರಜಾವಾಣಿಗಳಲ್ಲಿ ಪ್ರಕಟವಾಗಿ ಜನಪ್ರಿಯತೆಯನ್ನು ಗಳಿಸಿಕೊಂಡಿದೆ. ಹಾಗೂ ಕೆಲವು ಕಥೆಗಳು ಬೆಂಗಳೂರಿನ ಆಕಾಶವಾಣಿಯಲ್ಲೂ ಬಿತ್ತರಗೊಂಡಿವೆ. ಇವರ ವಿದೇಶ ಪ್ರವಾಸದ ಅನುಭವದಿಂದ ಇವರ ಕೆಲವು ಕೃತಿಗಳಲ್ಲಿ ವಿದೇಶಿ ಜಿವನಾನುಭವವೂ ಮೂಡಿದೆ. ಇಲ್ಲಿ ಅವರ ಎಲ್ಲಾ ಕಥೆಗಳು ಸಂಕಲನಗೊಂಡಿವೆ.

About the Author

ನೀಳಾದೇವಿ
(15 August 1932)

ಕನ್ನಡದ ಹಿರಿಯ ಲೇಖಕಿ ಬಾಲ್ಯದಲ್ಲೇ ಸಾಹಿತ್ಯ ರಚನೆಯಲ್ಲಿ ತೊಡಗಿದವರು ನೀಳಾದೇವಿಯವರು 1932 ಆಗಸ್ಟ್ 22 ರಂದು ಮೈಸೂರಿನಲ್ಲಿ ಜನಿಸಿದರು. ಇವರ ಪ್ರಥಮ ಕತೆ  “ಅಪ್ಪಾ ನಾನೂ ಬರ್ತಿನಪ್ಪಾ" ತಾಯಿನಾಡು ಪತ್ರಿಕೆಯಲ್ಲಿ ಪ್ರಕಟವಾದಾಗ ಇವರಿಗೆ 15 ವರ್ಷ. ಕಾದಂಬರಿ, ಕಿರುಗತೆ, ಲಘುಹಾಸ್ಯ, ಶಿಶು ಸಾಹಿತ್ಯ, ನಾಟಕ, ಪ್ರವಾಸ ಕಥನ, ಅನುವಾದಗಳಲ್ಲಿ ಸಮರ್ಥವಾಗಿ ಕೈಯಾಡಿಸಿದ ಹಿರಿಯ ಕಿರುಗತೆಗಳ ಕತೆಗಾರ್ತಿ. ನೀಳಾದೇವಿ, ಅವರ ಅನೇಕ ಕಥಾ ಸಂಗ್ರಹಗಳೂ ಬಂದಿವೆ. ಒಟ್ಟು 40 ಗ್ರಂಥಗಳು. ‘ಬೇಡಿ ಬಂದವಳು’, ಇವರ ಒಂದು ಜನಪ್ರಿಯ ಕಾದಂಬರಿ. ಇದು ತಮಿಳು ಮತ್ತು ಕನ್ನಡ ಭಾಷೆಗಳಲ್ಲಿ ಚಲನಚಿತ್ರವಾಗಿ ತೆರೆ ...

READ MORE

Related Books