ಕಾದಂಬರಿಕಾರ, ಚಿಂತಕ ಶಾಂತಿನಾಥ ದೇಸಾಯಿ ಅವರ ಸಮಗ್ರ ಕತೆಗಳ ಸಂಕಲನವಿದು. ಮಂಜುಗಡ್ಡೆ, ಕ್ಷಿತಿಜ, ದಂಡೆ, ರಾಕ್ಷಸ, ಪರಿವರ್ತನೆ, ಕೂರ್ಮಾವತಾರ, ಈಚಿನ ಕಥೆಗಳು ಸಂಕಲನದ ಕವಿತೆಗಳು -ಈ ಕೃತಿಯಲ್ಲಿ ಒಳಗೊಂಡಿವೆ..
ಮಂಜುಗಡ್ಡೆ ಕತೆಯ ಕುರಿತು ಲೇಖಕರು ಬರೆಯುತ್ತಾ ‘ಮುಂಬಯಿ ಜೀವನದ ಹಿನ್ನೆಲೆಯಲ್ಲಿ ಜೀವನ ಮೌಲ್ಯಗಳನ್ನು ಕಳೆದುಕೊಳ್ಳುತ್ತ, ಮಂಜುಗಡ್ಡೆಯಾಗುತ್ತ ನಡೆದ ಒಂದು ತರುಣ ಜೀವದ ಆತಂರಿಕ ದರ್ಶನವಿಲ್ಲದೆ, ಸಂಜ್ಞಾಪ್ರವಾಹದ ಶೈಲಿಯನ್ನು ಉಪಯೋಗಿಸಿದೆ’ ಎಂದಿದ್ದಾರೆ. ಇದು ಕತೆಯ ಸಾರಾಂಶವನ್ನು ವಿವರಿಸುತ್ತದೆ.
ಮಂಜುಗಡ್ಡೆ ಸಂಕಲನದ ಮಂಜುಗಡ್ಡೆ, ಚಂದೂ, ಶೋಭನೆಯ ಹಾದಿ, ಮಳೆ!, ಇದೂ ಒಂದು ರೀತಿ, ಹೊಸ್ತಿಲದಾಚೆಗೆ ಕತೆಗಳು ಈ ಸಂಕಲನದಲ್ಲಿವೆ. ಹಾಗೆಯೇ ಕ್ಷಿತಿಜ ಕತಾ ಸಂಕಲನದ ಕ್ಷಿತಜ, ಅಂಟಿದ ನಂಟು, ದಿಗ್ಭ್ರಮೆ, ಗಂಡ ಸತ್ತ ಮೇಲೆ, ಅಕಾಲ, ಬೇಸರ ಕತೆಗಳಿವೆ. ದಂಡೆ ಕತಾ ಸಂಕಲನದ ದಂಡೆ, ಏಕಾಂಗಿ, ಅವರು, ಕಾರು ಮತ್ತು ನಗೆ, ತೃಪ್ತ, ನೀಚ, ನಿರ್ಣಯ, ‘ನಾನಾ’ನ ತೀರ್ಥಯಾತ್ರೆ ಕತೆಗಳು.
ರಾಕ್ಷಸ ಕತಾ ಸಂಗ್ರಹದ ರಾಕ್ಷಸ, ಸಹೋದರ, ನದಿಯ ನೀರು, ಯಥಾ ಕಾಷ್ಠಂಚ, ನೀ ನನ್ನ ನಗೆ ಬಾಯೆಂದು, ತನ್ನ ಹಿಂದೆ ಬಿಟ್ಟುಹೋಗಿದ್ದಾಳೆ, ಬಿಡುಗಡೆ, ರಾಜೀನಾಮೆ, ಇಲಿಗಳು ಕತೆಗಳು ಹಾಗೆಯೇ, ಪರಿವರ್ತನೆ ಕಥಾ ಸಂಕಲನದ ಪರಿವರ್ತನೆ, ಯಾಕೆ?, ಶಿವೂನ ಬಂಡಾಯ, ಸೇಡು-ಗೀಡು, ದುಃಸ್ವಪ್ನ, ಹುಚ್ಚ ಪ್ರಯಾಣ ಕತೆಗಳಿವೆ.
ಕೂರ್ಮಾವತಾರ ಸಂಕಲನದ ಕೂರ್ಮಾವತಾರ, ಭರಮ್ಯಾ ಹೋಗಿ ನಿಳನಾದದ್ದು, ಅಂತರ, ಮಧ್ಯಸ್ಥರು, ಪ್ರತಿಕೃತಿ, ಐವತ್ತು ತುಂಬಿದಾಗ, ಯಶಸ್ಸಿನ ವಾಸನೆ ಹಾಗೂ ಈಚಿನ ಕತೆಗಳು ಸಂಕಲನದ ವಿಯೋಗ ಜವಾಬ್ದಾರಿ, ಕಾಡುಕೋಣ ಮತ್ತು ಮನುಷ್ಯ, ಎಲ್ಲಾದರೂ ಎಂತಾದರು ಇರು, ಪ್ರವೃತ್ತಿ ನಿವೃತ್ತಿ, ಹೀರೊ ಹಾಗೂ ಲಗ್ನ ಕತೆಗಳು ಈ ಸಮಗ್ರ ಕೃತಿಯಲ್ಲಿ ಒಳಗೊಂಡಿವೆ.
©2024 Book Brahma Private Limited.