ಅಕ್ಷಯ ನಾಗ್ರೇಶಿ ಅವರ ಮೊದಲ ಕಥಾ ಸಂಕಲನ ಕೃತಿ ‘ಮ್ಯಾಜಿಕ್ ನಡಿದು ಹೋಯಿತು..!’ ಎಂಟು ಅಪರೂಪದ ಕತೆಗಳನ್ನು ವಾಸ್ತವ ಸಂಗತಿಗಳನ್ನ ಇಟ್ಟುಕೊಂಡು ಬರೆದ ಇಲ್ಲಿನ ಕತೆಗಳು ಹೈಸ್ಕೂಲಿನವರೆಗೆ ಬಂದಿರುವ, ಹದಿಹರೆಯದ ಹೊಸ್ತಿಲಲ್ಲಿರುವ ಮಕ್ಕಳ ಸುತ್ತಲಿನ ಅನುಭವ ದ್ರವ್ಯವನ್ನು ಹೊಂದಿದವುಗಳಾಗಿವೆ. ಮುಗ್ಧ ಮನಸ್ಸುಗಳಿಗೆ ಒಂದೊಂದು ಕತೆಯೂ ಒಂದೊಂದು ನೀತಿಯನ್ನು ಸಾಂಕೇತಿಕವಾಗಿ ನೀಡುತ್ತವೆ. ಇಲ್ಲಿ ಬಡತನದ ಬೇಗುದಿಯಲ್ಲಿ ಸಿಲುಕಿ ಬದುಕಿನ ವಾಸ್ತವವನ್ನು ಅರಿತುಕೊಂಡ ಮಕ್ಕಳಿದ್ದಾರೆ, ಕುಡಿತ- ಧೂಮಪಾನದಂತಹ ಚಟಕ್ಕೆ ಬಲಿಯಾಗಿ ಕುಟುಂಬವನ್ನು ಸಂಕಷ್ಟಕ್ಕೆ ತಳ್ಳುವ ಬೇಜವಾಬ್ದಾರಿ ಅಪ್ಪಂದಿರಿದ್ದಾರೆ. ಮತ್ತು ಇಲ್ಲಿ ಹೆಚ್ಚಾಗಿ ಮಕ್ಕಳ ಸುತ್ತಲೇ ನಡೆಯುವ ಕಥಾಲೋಕವಿದೆ. ಪುಸ್ತಕದ ಪರಿವಿಡಿಯಲ್ಲಿ; ಇನ್ನು ಅವನು ಸೇದುವುದಿಲ್ಲ, ಬಿರುಗಾಳಿ ಬೀಸಿತು, ಗೆಳೆಯರು ಅವರೆಲ್ಲಾ, ಗಿರಿಜಾ ಅನ್ನೋ ಹುಡುಗಿ, ಮ್ಯಾಜಿಕ್ ನಡೆದು ಹೋಯಿತು, ಬಣ್ಣ ಬಣ್ಣದ ಲೋಕ, ನನಗೂ ಆಸೆ ಇದೆ, ಗೆಳೆತನ ಅಂದ್ರೆ ಮುಂತಾದ ಶೀರ್ಷಿಕೆಗಳ ಕತೆಗಳಿವೆ.
©2024 Book Brahma Private Limited.