ರಮಾನಂದ ಘಾಟೆ ಅವರ ಸಮಗ್ರ ಕತೆಗಳು

Author : ಬಿ. ಜನಾರ್ದನ ಭಟ್

Pages 280

₹ 250.00




Year of Publication: 2017
Published by: ಪಾಂಚಜನ್ಯ ಪಬ್ಲಿಕೇಷನ್ಸ್
Address: ನಂ.1, ಮಿಲ್ಕ್ ನರಸಿಂಹಯ್ಯ ಲೇಔಟ್, ಎನ್.ಆರ್.ಐ. ಇನ್ ಸ್ಟಿಟ್ಯೂಟ್ ಹತ್ತಿರ, ಪಾಪರೆಡ್ಡಿಪಾಳ್ಯ, ಬೆಂಗಳೂರು- 560072

Synopsys

‘ರಮಾನಂದ ಘಾಟೆ ಅವರ ಸಮಗ್ರ ಕತೆಗಳು’ ಡಾ. ನಾ. ಮೊಗಸಾಲೆ ಅವರು ಗೌರವ ಸಂಪಾದಕರಾಗಿ, ಡಾ.ಬಿ. ಜನಾರ್ದನ ಭಟ್ ಅವರ ಸಂಪಾದಕತ್ವದಲ್ಲಿ ಪ್ರಕಟವಾದ ಕೃತಿ. ಈ ಕೃತಿಗೆ ಡಾ. ನಾ. ಮೊಗಸಾಲೆ ಅವರ ಬೆನ್ನುಡಿ ಬರಹವಿದೆ. ಮಂಗಳೂರಿನಲ್ಲಿ ಕಳೆದ ಶತಮಾನದ ಮಧ್ಯಾವಧಿಯಲ್ಲಿ ಸುಪ್ರಸಿದ್ಧ ಆಯುರ್ವೇದ ವೈದ್ಯರಾಗಿದ್ದ ಆಯುರ್ವೇದ ಭೂಷಣ ಶ್ರೀ.ಎಂ.ವಿ.ಶಾಸ್ತ್ರಿ ಅವರ ಚಿಕಿತ್ಸಾಲಯದಲ್ಲಿ ಔಷಧ ಸಂಯೋಜಕ(ಕಂಪೌಂಡರ್) ರಾಗಿದ್ದ ಶ್ರೀ ರಮಾನಂದ ಘಾಟೆಯವರು ನಮ್ಮ ನಡುವೆ ಇದ್ದ ಒಬ್ಬ ಅಪರೂಪದ ಸಾಹಿತಿ. ಕನ್ನಡ, ಮರಾಠಿ ಮತ್ತು ಆಂಗ್ಲ ಭಾಷಾ ಪಂಡಿತರಾಗಿದ್ದ ಅವರು ಮರಾಠಿ ಮನೆ ಮಾನತಿನವರಾಗಿದ್ದು ಕನ್ನಡಕ್ಕೆ ನೀಡಿದ ಕೊಡುಗೆ ಬಹಳ ದೊಡ್ಡದು. ಕೆನರಾ ಹೈಸ್ಕೂಲಿನಲ್ಲಿ ತಮ್ಮ ಗುರುಗಳಾಗಿದ್ದ ಆ ಕಾಲದ ಪ್ರಸಿದ್ದ ಲೇಖಕರಾದ ತೊಟ್ಟತ್ತೋಡಿ ನಾರಾಯಣ ಭಟ್ಟ ಮತ್ತು ಜೆ.ವಾಮನ ಭಟ್ಟರ ಪ್ರೇರೇಪಣೆಯಿಂದ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡ ಅವರು, ತಮ್ಮ ಬರಹಗಳಲ್ಲಿ ಹಾಸ್ಯಕ್ಕೆ ವಿಶಿಷ್ಟ ಮತ್ತು ಪ್ರಧಾನವಾದ ಸ್ಥಾನವನ್ನು ನೀಡಿ ನೂರಾರು ಸಣ್ಣಕತೆ ಮತ್ತು ವಿನೋದ ಲೇಖನಗಳನ್ನು ಬರೆದರು. ಈಗ ಉಪಲಬ್ದವಿರುವ ಅವರ ಕಾನ್ವೆಂಟ್ ಗರ್ಲ್ ಮತ್ತು ಸೀತಾರತ್ನ ಎಂಬ ಎರಡು ಕೃತಿಗಳು ಇದಕ್ಕೆ ಉದಾಹರಣೆಯಾಗಿದ್ದು, ಘಾಟೆಯವರ ಬರಹಗಳು ಅವರ ನಂತರದ ಪೀಳಿಗೆಗೆ ಮಾದರಿ ಮತ್ತು ಪ್ರೇರಣೆ ನೀಡುವಷ್ಟು ಪ್ರಬುದ್ಧವಾಗಿದ್ದವು ಎನ್ನುವುದನ್ನು ಪ್ರಸಿದ್ಧ ಸಾಹಿತಿಗಳಾಗಿದ್ದ ತ.ರಾ.ಸು ಮತ್ತು ಆನಂದ ಅವರು ಮುಕ್ತ ಕಂಠದಿಂದ ಪ್ರಶಂಸಿಸಿದ್ದರು. ಇಲ್ಲಿ ಚಿತ್ರಿತವಾಗಿರುವ ಸರಸ ದಾಂಪತ್ಯದ ಸುಂದರ ಚಿತ್ರಣಗಳು ಕೆ.ಎಸ್. ನರಸಿಂಹಸ್ವಾಮಿಯವರ ಮೈಸೂರು ಮಲ್ಲಿಗೆಯ ಕವನಗಳನ್ನು ಗದ್ಯ ರೂಪದಲ್ಲಿ ಓದುವಂತಹ ಅನುಭವಕ್ಕೆ ಸಮಾನವಾದದು ಎಂದು ಡಾ. ಬಿ. ಜನಾರ್ದನ ಭಟ್ ಹೇಳುತ್ತಾರೆ. ಯುನಾನಿ ಮತ್ತು ಆಯುರ್ವೇದ ಶಾಸ್ತ್ರಗಳನ್ನು ಆಳವಾಗಿ ಅಭ್ಯಸಿಸತೊಡಗಿದ ಮೇಲೆ ಅವರು ತಮ್ಮ ನಡುವಯಸ್ಸಿನಲ್ಲಿ ಬರವಣಿಗೆಗೆ ಬೆನ್ನು ಹಾಕಿದ್ದು ಕನ್ನಡಕ್ಕಾದ ನಷ್ಟ. ತಮ್ಮ ನಿಜ ಜೀವನದ ನೋವುಗಳನ್ನು ಮರೆಯಲು ಜನಸೇವೆಯನ್ನೇ ಮುಖ್ಯವಾಗಿರಿಸಿಕೊಂಡ ಘಾಟೆಯವರನ್ನು ಅವರು ನಮ್ಮ ನಡುವೆ ಇದ್ದಾಗಲೂ, ಅವರ ನಿಧನದನಂತವೂ ಕನ್ನಡ ಸಾಹಿತ್ಯ ಕ್ಷೇತ್ರ ಮರೆತೇ ಬಿಟ್ಟಿತು. ಕಾಂತಾವರ ಕನ್ನಡ ಸಂಘವು ತನ್ನ ದಶಮಾನೋತ್ಸವ ವರ್ಷದಲ್ಲಿ (22-10-1985) ಅವರನ್ನು ಕರೆದು ಸನ್ಮಾನಿಸಿದ್ದು ಬಿಟ್ಟರೆ, ಪ್ರಶಸ್ತಿ ಸನ್ಮಾನದ ಗೌರವಗಳು ಅವರಿಂದ ದೂರವೇ ಉಳಿದುದು ನಮ್ಮ ಸಾಂಸ್ಕೃತಿಕ ಕ್ಷೇತ್ರದದ ಔದಾಸೀನ್ಯಕ್ಕೆ ಸಾಕ್ಷಿ ಎನ್ನುತ್ತಾರೆ ಡಾ. ನಾ. ಮೊಗಸಾಲೆ. ರಮಾನಂದ ಘಾಟೆಯವರ ಸಮಗ್ರ ಕತೆಗಳು ಈ ಕೃತಿಯಲ್ಲಿ ಸಂಕಲನಗೊಂಡಿವೆ.

About the Author

ಬಿ. ಜನಾರ್ದನ ಭಟ್

ಸಾಹಿತಿ ಡಾ. ಬಿ.ಜನಾರ್ದನ ಭಟ್ ಅವರದು ಬಹುಮುಖ ಪ್ರತಿಭೆ. ಅವರು ಕಾದಂಬರಿಕಾರರಾಗಿ, ಕಥೆಗಾರರಾಗಿ, ವಿಮರ್ಶಕರಾಗಿ, ಅಂಕಣಕಾರರಾಗಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಅವರ ಸಾಹಿತ್ಯಾನುಸಂಧಾನ ಬಹುಸೂಕ್ಷ್ಮವಾದುದು. ಬಹುಭಾಷಿಕ, ಬಹುಶ್ರುತ ವಿದ್ವಾಂಸರೂ ಸೃಜನಶೀಲ ಲೇಖಕರೂ ಆಗಿರುವ ಭಟ್ ಅವರದು ಸ್ಪೋಪಜ್ಞತೆಯ ಹಾದಿ. ತಮ್ಮ ಕೃತಿಗಳಲ್ಲಿ ಹೆಚ್ಚಿನ ಸ್ವಂತಿಕೆಯ ಛಾಪನ್ನು ಒತ್ತುತ್ತಾ ಬಂದಿರುವ ಡಾ. ಜನಾರ್ದನ ಭಟ್ ಅವರು ಸಮಕಾಲೀನ ಕನ್ನಡದ ಹೆಸರಾಂತ ಲೇಖಕರಲ್ಲಿ ಒಬ್ಬರು. ಭಟ್ ಅವರ ಹೆಚ್ಚಿನ ಕೃತಿಗಳು ಆಳ ಮತ್ತು ಸಂಕೀರ್ಣತೆಯನ್ನು ಹೊಂದಿರುವುದು ವಿಶೇಷ. ವಿದ್ವತ್ತು ಮತ್ತು ಸೃಜನಶೀಲತೆ ಎರಡನ್ನೂ ಮೈಗೂಡಿಸಿಕೊಂಡಿರುವ ಬೆಳ್ಮಣ ನ ಡಾ. ಬಿ.ಜನಾರ್ದನ ...

READ MORE

Related Books