ನೂರಾರು ಲೇಖಕರ ನೂರಾರು ಕತೆಗಳು

Author : ವಿವಿಧ ಲೇಖಕರು

Pages 260

₹ 270.00




Year of Publication: 2022
Published by: ಸಂಸ್ಕೃತಿ ವಿಶ್ವ ಪ್ರತಿಷ್ಟಾನ
Address: ಉಡುಪಿ

Synopsys

ನೂರಾರು ಲೇಖಕರ ನೂರಾರು ಕತೆಗಳು ವಿವಿಧ ಲೇಖಕರ ನೂರಾರು ಕತೆಗಳ ಸಂಕಲನ. ಮೊದಲು 'ಕೊರೋನಾ ಪೀಡನೆಯ ಕಾಲದಲ್ಲಿ ಅಸ್ತವ್ಯಸ್ತವಾದ ನಿಮ್ಮ ದೈನಂದಿನ ಬದುಕು, ನೀವು ಅನುಭವಿಸಿದ ಕಷ್ಟಗಳು, ನಿಮ್ಮ ಮಾನಸಿಕ ಹಿಂಸೆಗಳು, ಬುಡಮೇಲಾದ ಸಾಮಾಜಿಕ ಬದುಕುಗಳ ಕುರಿತು ಒಂದು ಪುಟದಷ್ಟು ಮಿನಿ ಕತೆ ಬರೆದು ಕಳುಹಿಸಿ ' ಎಂದು ಸಂಘಟಕರು ಸೂಚಿಸಿದ್ದರಾದರೂ ಇಲ್ಲಿರುವ ಎಲ್ಲಾ ಕತೆಗಳು ಕೊರೋನಾ ಕತೆಗಳಲ್ಲ. ಕೆಲವು ಕತೆಗಳು ಕೊರೋನಾ ಕಾಲದಲ್ಲಿ ಕೆಲಸ ಕಳೆದುಕೊಂಡು ಬಡತನದ ಕಷ್ಟವನ್ನು ಅನುಭವಿಸಿದ್ದು, ಮನುಷ್ಯ ಸಂಬಂಧಗಳ ಸ್ವಭಾವದಲ್ಲಿ ಇದ್ದಕ್ಕಿದ್ದಂತೆ ಆದ ಬದಲಾವಣೆ, ಆಸ್ಪತ್ರೆಗಳಲ್ಲಿ ಸಿಬಂದಿಗಳ ವರ್ತನೆ, ಜನಸೇವೆಯ ಹೆಸರಿನಲ್ಲಿ ಆಗುವ ಪ್ರಹಸನ, ಅಕಾಲ ಮರಣದಿಂದಾಗಿ ಬಂಧು ಬಳಗದವರನ್ನು ಕಳೆದುಕೊಂಡು ಪಡುವ ದುಃಖ, ಕೊರೋನಾ ಹರಡುವಿಕೆಯನ್ನು ತಡೆಗಟ್ಟುವ ಉದ್ದೇಶದಿಂದ ಸರಕಾರವು ವಿಧಿಸಿದ ನಿಯಮಗಳನ್ನು ನಿರ್ಲಕ್ಷಿಸಿದ ಪರಿಣಾಮವಾಗಿ ಉಂಟಾದ ಅನಾಹುತ ಮತ್ತು ಆ ಬಗ್ಗೆ ಪರಿತಾಪ, ಜೀವನ ನಿರ್ವಹಣೆಗೂ ಹಣವಿಲ್ಲದೆ ಪರದಾಡು ತ್ತಿರುವಾಗ ಅನಿರೀಕ್ಷಿತವಾಗಿ ಒದಗಿ ಬರುವ ಸಹಾಯ, ತಾನು ತೀರಾ ಅಸಹಾಯಕ ಸ್ಥಿತಿಯಲ್ಲಿದ್ದರೂ ಅನಾಥ ಮಕ್ಕಳ ಬಗ್ಗೆ ತೋರುವ ಮಾನವೀಯ ಕಾಳಜಿ, ಅಪಾಯದ ಕಾಲದಲ್ಲಿ ತಂದೆಯನ್ನು ನಿರ್ಲಕ್ಷಿಸುವ ಮಗಳು, ಬೇರೆ ಹೆಣ್ಣಿನ ಹಿಂದೆ ಹೋಗಿ ಹೆಂಡತಿಯನ್ನು ನಿರ್ಲಕ್ಷಿಸಿ ಕೊರೋನಾ ಬಂದಾಗ ಅವಳ ಸಹಾಯ ತೆಗೆದುಕೊಂಡು ಮತ್ತೆ ಅವಳನ್ನು ದೂರ ಮಾಡುವ ಹೃದಯಹೀನ ಗಂಡ - ಹೀಗೆ ನೇರವಾಗಿ ಕೊರೋನಾ ಸುತ್ತುಮುತ್ತವೇ ಘಟನೆ- ಸನ್ನಿವೇಶಗಳನ್ನು ಕಟ್ಟಿಕೊಂಡ ಕಥೆಗಳಿವೆ. ಅಪ್ಪನ ಮಿಸ್ಡ್ ಕಾಲ್, ವಿತರಣೆ, ಪಶ್ಚಾತ್ತಾಪ, ಬೆಳ್ಳಿಕಿರಣ, ಒಡನಾಡಿ, ಅನಾಥ ಮಗು, ಸ್ವಾಭಿಮಾನದ ದುಡಿಮೆ, ಸಣ್ಣ ಸ್ವಾರ್ಥ, ದೇವರ ಆಟ ಬಲ್ಲವರಾರು ಮೊದಲಾದ ಕಥೆಗಳು ಕೊರೋನಾ ಕಾರ್ಮೋಡದ ವಾತಾವರಣವನ್ನು ಸಮರ್ಥವಾಗಿ ಸೃಷ್ಟಿಸುತ್ತವೆ.

About the Author

ವಿವಿಧ ಲೇಖಕರು

. ...

READ MORE

Related Books