ಖ್ಯಾತ ಕವಿ ಎಂ.ಎನ್. ವ್ಯಾಸರಾವ್ ಅವರ ಸಮಗ್ರ ಕಥೆಗಳನ್ನು ಸಂಪಾದಿಸಿದ ಕೃತಿ-ಪುಷ್ಪಗಂಧಿ. ಲೇಖಕರಾದ ಕಗ್ಗೆರೆ ಪ್ರಕಾಶ ಹಾಗೂ ಶ್ರೀಧರ ಬನವಾಸಿ ಅವರು ಸಂಪಾದಕರು. ಕನ್ನಡ ಚಲನಚಿತ್ರಗೀತೆಗಳನ್ನು ರಚಿಸಿ ಪ್ರಸಿದ್ಧಿ ಪಡೆದಿರುವ ಎಂ.ಎನ್. ವ್ಯಾಸರಾವ್ ಅವರು ಕಥೆಗಳನ್ನು ರಚಿಸುವ ಮೂಲಕವೂ ಕನ್ನಡ ಸಾಹಿತ್ಯದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಬೆಳ್ಳಿ ಮೂಡುವ ಮುನ್ನ. ಮಳೆಯಲ್ಲಿ ನೆನೆದ ಮರಗಳು ಹೀಗೆ ಹಲವಾರಿ ಕಥೆಗಳನ್ನು ಬರೆದಿದ್ದು, ಬಹುತೇಕ ಕಥೆಗಳು ಇತರೆ ಭಾಷೆಗಳಿಗೂ ಅನುವಾದಗೊಂಡಿವೆ. ಇವರ ಮಳೆಯಲ್ಲಿ ನೆನೆದ ಮರಗಳು ಕಥಾಸಂಕಲನಕ್ಕೆ ಸಾಹಿತ್ಯ ಅಕಾಡೆಮಿ ಬಹುಮಾನ ಬಂದಿದೆ.
©2025 Book Brahma Private Limited.