ಚರಿತ್ರೆಯನ್ನು ಸಾಂಸ್ಕೃತಿಕ ನೆಲೆಯೊಂದಿಗೆ ತಗುಳ್ಚಿರುವ ಕಾರಣದಿಂದ ಈ ಕೃತಿಗೆ ಬಹುಮುಖತೆ ಲಭಿಸಿದೆ. ಈ ಗುಣದಿಂದ ಕನ್ನಡದ ಚಿಂತನ ಲೋಕಕ್ಕೆ ಬಹುಮುಖ್ಯ ಆಯಾಮವನ್ನು ಈ ಕೃತಿ ವಿಸ್ತರಿಸುತ್ತದೆ. ಲೇಖಕರು ಅಜ್ಞಾತ ಚರಿತ್ರೆಯನ್ನು ಹುಡುಕಾಡುವ ಬಹುದೊಡ್ಡ ಸಾಂಸ್ಕೃತಿಕ ಜವಾಬ್ದಾರಿಯನ್ನು ಈ ಕೃತಿಯಲ್ಲಿ ನಿರ್ವಹಿಸಿದ್ದಾರೆ. ಚರಿತ್ರೆಯ ದಾಖಲೀಕರಣದ ಅಭಿಜಾತ ಮಾದರಿಯನ್ನು ಬಿಟ್ಟುಕೊಟ್ಟು ನಿಜ ಚರಿತ್ರೆಯ ಗುರುತುಗಳಿಗಾಗಿ ಹಂಬಲಿಸಿ ಮೌಖಿಕರ ಕಡೆಗೆ ನೋಡಿದಾಗ ವಸಾಹತ್ತೋತ್ತರ ಶೈಕ್ಷಣಿಕ ಜ್ಞಾನದ ಅರಿವು ಮತ್ತು ವಿಜ್ಞಾನ ತಂತ್ರಜ್ಞಾನಗಳ ಪ್ರಭಾವ ಉಳಿಗಮಾನ್ಯ ಭೂ ಸಂಬಂಧಗಳ ಪಲ್ಲಟ ಹಾಗೂ ನವ ಬಂಡವಾಳಶಾಹಿ ಆರ್ಥಿಕ ಬೆಳವಣಿಗೆಗಳ ಹೊಡೆತಕ್ಕೆ ಸಿಕ್ಕಿ ಜನಸಾಮಾನ್ಯರ ಬದುಕಿನಲ್ಲಿ ಸೃಷ್ಟಿಯಾಗಿರುವ ತಲ್ಲಣಗಳು ಸಹಜವಾಗಿ ಮೌಖಿಕರ ಚಾರಿತ್ರಿಕ ಸ್ಮರಣೆಗಳನ್ನು ವಿಸ್ಮೃತಿಗೆ ಒಳಗು ಮಾಡಿವೆ.
©2025 Book Brahma Private Limited.