ಲೇಖಕ ಗಿರಿಮನೆ ಶ್ಯಾಮರಾವ್ ಅವರ ಕಾದಂಬರಿ ಕೃತಿ ʻಬಣ್ಣದ ಜಿಂಕೆʼ. ಮದುವೆಯಾಗಿ ದಾಂಪತ್ಯಕ್ಕೆ ಕಾಲಿರಿಸಿದವರಲ್ಲಿ ಒಬ್ಬರು ಮಲೆನಾಡಿನ ಕಾಡಿಗೆ ಬಂದು ಅಲ್ಲೇ ಬದುಕು ಕಟ್ಟಿಕೊಂಡರೆ ಮತ್ತೊಬ್ಬರು ವಿರುದ್ದ ದಿಕ್ಕಿನ ಗ್ಲಾಮರ್ ಪ್ರಪಂಚವನ್ನು ಆರಿಸಿಕೊಂಡ ಕಾಲ್ಪನಿಕ ಕತೆ. ಇಲ್ಲಿ ಸಂಸಾರ ಮರೆತು ಗ್ಲಾಮರ್ ಜಗತ್ತಿನ ಆಕರ್ಷಣೆಗೆ ಒಳಗಾಗಿ ದೈಹಿಕ ಸಂಬಂಧಗಳ ಮಿತಿ ಅರಿಯದೆ ಆಧುನಿಕತೆಯ ವ್ಯಭಿಚಾರವೇ ಬದುಕು ಎಂದುಕೊಂಡು ಅದರೊಳಗೆ ಮುಳುಗಿ ಕಳೆದೇ ಹೋಗಿ ದುಃಖ ತಂದುಕೊಂಡ ನಟಿಯ ನೋವಿನ ಎಳೆ ಇದೆ. ಅಂತಹಾ ವ್ಯವಹಾರಗಳಿಂದ ಮುಂದೆ ಅದು ತನಗೆ ಮಾತ್ರವಲ್ಲದೆ ತನ್ನ ಸುತ್ತ ಇರುವವರನ್ನೂ ಯಾವ ರೀತಿ ಕಾಡುತ್ತದೆ? ಎಷ್ಟು ಜನರಿಗೆ ನೋವು ಕೊಡುತ್ತದೆ ಎನ್ನುವುದರ ಸೂಕ್ಷ್ಮ ಸಂಗತಿಯನ್ನೂ ಇಲ್ಲಿ ಹೇಳಿದ್ದಾರೆ. ಹೀಗೆ ಗ್ಲಾಮರ್ ಬದುಕಿನೊಂದಿಗೆ ಡ್ರಗ್ಸ್ ಸೇರಿ ಅದರ ವ್ಯಸನಕ್ಕೆ ಬಿದ್ದು ಕೊನೆಗೆ ಕೊರಗಿ ಬದುಕು ಕಳೆದುಕೊಳ್ಳುವ ಸೆಲೆಬ್ರಿಟಿಗಳ ಉದಾಹರಣೆಗಳು ಸಾಕಷ್ಟಿವೆ. ಅಂತಹ ಸನ್ನಿವೇಶಗಳನ್ನು ಲೇಖಕರು ಇಲ್ಲಿ ಕತೆಯ ಮೂಲಕ ತಂದಿದ್ದಾರೆ.
©2024 Book Brahma Private Limited.