ಸಮಗ್ರ ಕತೆಗಳು

Author : ಎಂ.ಎಸ್.ಕೆ. ಪ್ರಭು

₹ 550.00




Year of Publication: 2017
Published by: ಸಾಹಿತ್ಯ ಭಂಡಾರ
Address: ಅಂಗಡಿ ಸಂ. 8, ಜೆಎಂ ಲೇನ್, ಬಳೆಪೇಟೆ, ಚಿಕ್ಕಪೇಟೆ, ಬೆಂಗಳೂರು-560053.
Phone: 09481604435

Synopsys

ಲೇಖಕ ಎಂ.ಎಸ್.ಕೆ. ಪ್ರಭು ಅವರ ಕೃತಿ ʻಸಮಗ್ರ ಕತೆಗಳುʼ. ಪುಸ್ತಕದ ಬೆನ್ನುಡಿಯಲ್ಲಿ ಲೇಖಕ ಜಯಂತ ಕಾಯ್ಕಿಣಿ ಅವರು, “ಕನ್ನಡವೆಂಬ ಸಂವೇದನೆಯನ್ನು ಸೂಕ್ತವಾಗಿ ಒಗ್ಗಿಸಿ, ಹೊಸ ಕಿಟಕಿಗಳನ್ನು ದಯಪಾಲಿಸಿದ ಮಹತ್ವದ ಕತೆಗಾರ ಎಂ ಎಸ್‌.ಕೆ. ಪ್ರಭು ಅವರ ಕತೆಗಳನ್ನು ಓದದೇ, ನಮ್ಮ ಪಯಣ ಅಪೂರ್ಣ. ಅಪ್ಪಟ ಹೊಸದಾದ ಅಷ್ಟೇ ಸ್ಪಂದನಶೀಲವಾದ ಒಂದು ಆವರಣದಲ್ಲಿ ನಮಗೆ ಉಸಿರಾಟವನ್ನು ಕಲ್ಪಿಸಿಕೊಟ್ಟ ಪ್ರಭು ಅವರ ಕತೆಗಳನ್ನು ಕೇವಲ ʻಫ್ಯಾಂಟಸಿ' ಎಂದು ಕರೆದುಬಿಟ್ಟರೆ ಅಪಚಾರ ಮಾಡಿದಂತೆ, ಏಕೆಂದರೆ ಫ್ಯಾಂಟೆಸಿಗಿಂತ ಮಿಗಿಲಾದ ನಿಜ ಇನ್ನೆನಿದೆ?  ಅನುಕ್ರಮಗಳ ಹಂಗಿಲ್ಲದೆ, ಭೌತಿಕ ಗಡಿಯಾರದ ಗುಂಗಿಲ್ಲದೆ ಶುದ್ದ ʻಕಲ್ಯಾಣದʼ ಆಲಾಪಗಳು ಇವು. ಮತ್ತು ಈ ಹೆಣಿಗೆಯ ಪ್ರತಿ ಎಳೆಗಳೂ, ಸಂಸಾರ ಸಾಗರದೊಳಗಿನ ಈಜಿನ ಅಲೆಗಳಿಂದಲೇ ಬಾಳ್ವೆಯ ಘನತೆಗಿನ ಸಮರ ಸಂಧಿಗಳಿಂದಲೇ ರೂಪು ತಾಳಿ ಬಂದಿವೆ. ಸತ್ಯಸಿಕ್ತವಾದ ʻಊಹಾಮೃಗʼವನ್ನು ಅವರು, ಯಾಗದ ಕುದುರೆಯಂತೆ ಬಿಟ್ಟುಬಿಟ್ಟಿದ್ದಾರೆ. ಇದ್ದ ಕೆಲಸ ಬದಿಗಿಟ್ಟು ಅದರ ಹಿಂದೆ ಓಡುವ ಅನನ್ಯ ದಿವ್ಯ ಆವಕಾಶ ಮಾತ್ರ ನಮ್ಮದು” ಎಂದು ಹೇಳಿದ್ದಾರೆ.

About the Author

ಎಂ.ಎಸ್.ಕೆ. ಪ್ರಭು
(15 July 1938 - 25 January 2000)

ಲೇಖಕ ಎಂ.ಎಸ್.ಕೆ. ಪ್ರಭು ಅವರು (ಮಂದಗೆರೆ ಸೀತಾರಾಮಯ್ಯ ಕೇಶವ ಪ್ರಭು) ಎಂದೇ ಪ್ರಸಿದ್ಧರು. ಮಂಡ್ಯ ಜಿಲ್ಲೆಯ ಕೃಷ್ಣರಾಜ ಪೇಟೆ ತಾಲ್ಲೂಕಿನ ಮಂದಗೆರೆ ಗ್ರಾಮದವರು. ತಂದೆ ಸೀತಾರಾಮಯ್ಯ, ತಾಯಿ ಸೀತಮ್ಮ. ಪ್ರಭು ಅವರ ಪ್ರಾಥಮಿಕ ಶಿಕ್ಷಣ ಮಂದಗೆರೆ ಹಾಗೂ ಹೊಳೆನರಸೀಪುರಗಳಲ್ಲಿ, ಪ್ರೌಢಶಿಕ್ಷಣವನ್ನು ಮೈಸೂರಿನಲ್ಲಿ ನಂತರ ಮೈಸೂರು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಮೊದಲ ದರ್ಜೆಯಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಬೆಂಗಳೂರಿನ ಅಕೌಂಟೆಂಟ್‌ ಜನರಲ್‌ರವರ ಕಚೇರಿಯಲ್ಲಿ.(1961ರಿಂದ 1977) ಕಾರ್ಯನಿರ್ವಹಿಸಿ, ಯು.ಪಿ.ಎಸ್‌.ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಹಣಾ ಅಧಿಕಾರಿಗಳಾಗಿದ್ದು, ಭದ್ರಾವತಿ, ಧಾರವಾಡ, ಬೆಂಗಳೂರು ಕೇಂದ್ರಗಳಲ್ಲಿ ಸೇವೆ ಸಲ್ಲಿಸಿ, 1996ರಲ್ಲಿ ನಿವೃತ್ತರಾದರು. ಹಲವಾರು ಶಬ್ಧ ಚಿತ್ರಗಳನ್ನೂ ನಿರ್ಮಿಸಿದ್ದು ಅವುಗಳಲ್ಲಿ ಐನ್‌ಸ್ಟೀನ್‌ರ ‘ಸಂಸಾರಾಲಯ’ ಮತ್ತು ‘ಅವತಾರ’ ...

READ MORE

Related Books