ಲೇಖಕ ವಿರೂಪಾಕ್ಷ ಕೋರಗಲ್ ಅವರ ಕಥಾ ಸಂಕಲನ ಕೃತಿ ʻಬದುಕಿನ ಚಿತ್ರಗಳುʼ. ಗ್ರಾಮೀಣ ಬದುಕಿನ ಕುರಿತು ಹೇಳುವ, ಅಲ್ಲಿನವರು ಬದುಕಿನಲ್ಲಿ ಕಂಡಿರುವ ವೈರುಧ್ಯಗಳನ್ನು ಕಥಾ ವಸ್ತುವಾಗಿ ತೆಗೆದು ಕತೆ ಹೆಣೆಯಲಾಗಿದೆ. ಹಾವೇರಿಯಲ್ಲಿ ನೆಲೆಗೊಂಡ ನಾಲ್ವರು ಗೆಳೆಯರ ಎಂಟು ಕತೆಗಳು ಇಲ್ಲಿವೆ. ಎಲ್ಲ ಕತೆಗಳ ಸ್ಪೂರ್ತಿ ಕತೆಗಾರರ ಗ್ರಾಮೀಣ ನೆಲೆ ಆಗಿದೆ. ನಮ್ಮ ನಾಡಿನ ವರ್ತಮಾನದ ಬದುಕಿನ ವಾಸ್ತವಗಳೇ ಆಗಿರುವ ಸಾಮ, ಆತ್ಮಹತ್ಯೆ, ಕೊಲೆ, ಹಾದರ, ದೆವ್ವ-ಪಿಶಾಚಿ, ಪಂಚಾಯಿತಿ ಮುಂತಾದವುಗಳು ಹಳ್ಳಿಯ ಪಾರದರ್ಶಕ ನಿತ್ಯದಲ್ಲಿ ಅನಾವರಣಗೊಳ್ಳುವುದನ್ನು ಇಲಲಿ ಕಾಣಬಹುದು. ಪುಸ್ತಕದ ಪರಿವಿಡಿಯಲ್ಲಿ ಹೆಣ್ಣು ದೆವ್ವ, ಕೂಗವ್ವ, ಸಾವಿನ ಸುತ್ತಲೂ, ಮಾರಿ, ಪರೀಕ್ಷೆ, ಪವಾಡ, ಛತ್ರ, ಜೀವೂರ ಸ್ಟೇಶನ್ ಮಾಸ್ತರ, ಆತ್ಮಹತ್ಯೆ ಮುಂತಾದ ಶೀರ್ಷಿಕೆಗಳ ಕತೆಗಳಿವೆ.
©2024 Book Brahma Private Limited.