`ಹಿಂದೂ ಮುಸ್ಲಿಂ ಮತ್ತು ಇತರ ಕತೆಗಳು’ ಪಾ. ವೆಂ ಆಚಾರ್ಯ ಅವರ ಕೃತಿಯಾಗಿದೆ. ಇಲ್ಲಿನ ಕಥೆಗಳು ಪರಿಸರದೊಂದಿಗೆ ಅರ್ಥೈಸಿದಾಗ ತಮ್ಮ ನೈಜ ಸಂದೇಶಗಳನ್ನು ತಿಳಿಸಿಕೊಡುತ್ತದೆ.
ಹೊಸತು - ಸೆಪ್ಟೆಂಬರ್-2002
ಕಸ್ತೂರಿ ಮಾಸಪತ್ರಿಕೆ ಮೂಲಕ ಒಂದು ಹೊಸ ವಿಚಾರ ವಂತಿಕೆಯನ್ನು ಪ್ರಾರಂಭಿಸಿದ ಲಾಂಗೂಲಾಚಾರ್ಯ, ಪಾ. ವೆಂ. ಅವರನ್ನು ಸಣ್ಣ ಕತೆಗಳ ಮೂಲಕ ಮತ್ತೆ ಭೇಟಿಯಾಗುವ ಅವಕಾಶ. ನಮ್ಮನ್ನು ಕೆಲ ದಶಕಗಳ ಹಿಂದಕ್ಕೆ ಕರೆದೊಯ್ಯುವ ಇಲ್ಲಿನ ಕಥೆಗಳನ್ನು ಅಂದಿನ ಪರಿಸರದೊಂದಿಗೆ ಅರ್ಥೈಸಿದಾಗ ಅವು ತಮ್ಮ ನೈಜ ಸಂದೇಶಗಳನ್ನು ಬಿಟ್ಟುಕೊಡುತ್ತವೆ. ಬಹುದೊಡ್ಡ ಮೊತ್ತದ - ಮೌಲ್ಯದ ಸಾಹಿತ್ಯ ಅವರಿಂದ ರಚಿತವಾಗಿದ್ದು ಅದರ ಅಲೆಗಳು ಇತ್ತೀಚಿನ ತರಂಗ ಪತ್ರಿಕೆಯವರೆಗೂ ಬಂದು ತಲುಪಿದೆ.
©2025 Book Brahma Private Limited.