`ನ್ಯಾಯ’ ವಿರೂಪಾಕ್ಷ ಕೋರಗಲ್ಲ ಅವರ ಕಥಾಸಂಕಲನವಾಗಿದೆ. ಇಲ್ಲಿನ ಎಲ್ಲ ಕಥೆಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಈ ಕಥೆಗಳೆಲ್ಲ ಪತ್ರಿಕೆಗಳಿಗಾಗಿ ಬರೆದ ಕಥೆಗಳಾಗಿರುವದರಿಂದ ಸೀಮಿತ ಪರಿಮಿತಿಯೊಳಗೆ ಬರದವುಗಳಾಗಿವೆ. ಪುಟದ ವಿತಿಯೊಳಗೆ- ಒಂದು ಕಥೆ ಬಿಚ್ಚಿಕೊಂಡು ಮುಕ್ತಾಯಗೊಳ್ಳುವದರಿಂದ ಅದಕ್ಕೆ ಮೀರಿದ ಕಥಾವಸ್ತುವನ್ನಾಗಲಿ, ಸಮಸ್ಯೆಯನ್ನಾಗಲಿ ಅಪೇಕ್ಷಿಸುವಂತಿಲ್ಲ ಎನ್ನುತ್ತಾರೆ ಇಲ್ಲಿ ಲೇಖಕ. ಕೊಪ್ಪಳದ ಸುತ್ತಲಿನ ಪ್ರದೇಶ, ಪರಿಸರ, ಭಾಷೆ ಈ ಕಥೆಗಳೊಳಗೆ ತುಂಬಿಕೊಂಡಿದ್ದು, ಭಾವನೆಗಳನ್ನು ಬಳಸಿಕೊಂಡಿರುವುದನ್ನು ನಾವು ಇಲ್ಲಿ ಕಾಣಬಹುದು.
©2024 Book Brahma Private Limited.