ಕಥಾಗತ ನವೀನ ಗಂಗೋತ್ರಿ ಅವರ ಕತೆಯಾಗಿದೆ. ನಮ್ಮ ನಮ್ಮ ಕಥೆಗಳು ನಮ್ಮ ನಮ್ಮ ಉಳಿವಿನ ಮೂಲ" ಇದೊಂದು ಸಾಲು ಸಾಕು; ನೈಜ ಇತಿಹಾಸದ ಅರಿವಿನ ಅವಶ್ಯಕತೆಯನ್ನು ಮೀರಿ ಅನಿವಾರ್ಯತೆಯನ್ನು ಪ್ರಜ್ಞೆಯಲ್ಲಿ ಬಿತ್ತುವುದಕ್ಕೆ. ಲೇಖಕರು ಮತ್ತನ್ನುತ್ತಾರೆ. "ಶುದ್ಧ ಇತಿಹಾಸವೆನ್ನುವುದು ಮಾಯಾಜಿಂಕೆ" - ಅವಶ್ಯಕತೆ ಇರುವುದು ಶುದ್ಧ ಇತಿಹಾಸವಲ್ಲ, ನೈಜ ಇತಿಹಾಸ. ಸರಳ ಶುದ್ಧ ಸುಂದರ ಭಾಷೆಯಲ್ಲಿ ಲೇಖಕರು ವರ್ತಮಾನದ ವಾಸ್ತವದ ನೆಲೆಗಟ್ಟಿನಲ್ಲಿ ಪುರಾಣೇತಿಹಾಸಗಳನ್ನು ಪದರ ಪದರವಾಗಿ ಅರಳಿಸಿದ್ದಾರೆ. ಈರ್ಷ್ಯೆ ಹುಟ್ಟಿಸುವ ಭಾಷೆ, ಕುತೂಹಲ ಮಿಶ್ರಿತ ತನ್ಮಯತೆಯ ಓದು, ಮುಗಿದಾಗ ಧನ್ಯತೆಯ ಭಾವ! ಇದು ನನ್ನ ಪೂರ್ವಜರ ಕತೆ, ನನ್ನ ಕತೆಯೂ ಹೌದು. ನನ್ನ ಜ್ಞಾನದ ಮಿತಿಯಲ್ಲಿ ವ್ಯಾಪಾರ ವ್ಯವಹಾರಕ್ಕೆಂದೇ ಸೀಮಿತವಾದ 'ಸಿಲ್ಕ್ ರೂಟ್' ಕ್ಷಣದಲ್ಲಿ ತತ್ವಜ್ಞಾನದ ಹರಿವಿನ ಹಾದಿಯಾಗಿ ಗೋಚರಿಸಿ ಬನವಾಸಿಯ ಕದಂಬರ ಮಯೂರಶರ್ಮ ನನ್ನ ಪೂರ್ವಜನಾದ; ನನ್ನ ಅರಿವಿನ ಪುರಾಣ ಇತಿಹಾಸಗಳು ಇಲ್ಲಿ ಕಥಾನಕವಾಯ್ತು, ನನ್ನ ಕಥೆಯಾಯ್ತು. ಈ ಅನುಭವಕ್ಕೆ ಋಣಿ ಎಂದು ಪುಸ್ತಕದ ಬೆನ್ನುಡಿಯಲ್ಲಿ ಸೇತುರಾಂ ತಿಳಿಸಿದ್ದಾರೆ.
©2024 Book Brahma Private Limited.