‘ಹಾಲಕ್ಕಿ ಕಥೆಗಳು’ ಕೃತಿಯು ಎಲ್.ಆರ್. ಹೆಗಡೆ ಅವರ ಮೂಲ ಕೃತಿಯಾಗಿದ್ದು, ರೇಣುಕಾ ರಾಮಕೃಷ್ಣ ಭಟ್ಟ ಅವರು ಸಂಪಾದಿಸಿದ್ದಾರೆ. ಡಿಜಿಟಲ್ ಜಾನಪದದ ಮೂಲಕ ಮುಕ್ತಜ್ಞಾನ ಸಂಗ್ರಹಕ್ಕೆ ಬಂದ ಪರಂಪರೆಯ ಜಾನಪದ ಸಂಗ್ರಹಗಳು!. ಸಾಹಿತ್ಯಕ್ಕಾಗಿ ಎಲ್.ಆರ್.ಹೆಗಡೆಯವರು ನೀಡಿದ ಕೊಡುಗೆ ಬಹಳ ವೈವಿಧ್ಯಮಯ. ವಿವಿಧ ಜನಾಂಗಗಳ ಉಪಸಂಸ್ಕೃತಿಯನ್ನು ಆಳವಾಗಿ ಅಧ್ಯಯನ ನಡೆಸಿ ಪ್ರಕಟಿಸಿರುವ ಪ್ರಮುಖ ಕೃತಿಗಳೆಂದರೆ ಮುಕ್ತಿ ಹೊಲೆಯರ ಪದಗಳು. ಕುವರಿ ಮರಾಠಿ ಕಥೆಗಳು, ಗುಮಟೆಯ ಪದಗಳು, ಕರಾವಳಿಯ ಜನಪದ ಕಥೆಗಳು ಮುಂತಾದವುಗಳು. ಇವಲ್ಲದೆ ಇವರ ಇತರ ಜಾನಪದ ಕೃತಿಗಳೆಂದರೆ ತಿಮ್ಮಕ್ಕನ ಪದಗಳು ಪರಮೇಶ್ವರಿಯ ಪದಗಳು, ಉತ್ತರ ಕನ್ನಡ ಜಿಲ್ಲೆಯ ಜಾನಪದ ಕಥೆಗಳು, ಮೂಢನಂಬಿಕೆಗಳು, ಹಾಲಿನ ತೆನೆ, ಹಾಡಲುಂಟೇ ನಿನ್ನ ಮಡಿಲಲ್ಲಿ, ಜಾನಪದ ಸಾಹಿತ್ಯದಲ್ಲಿ ಮದುವೆ ಮುಂತಾದವುಗಳು. ಜಾನಪದ ಗೀತೆ, ಕಥನ ಗೀತೆ ಮತ್ತು ವಿಮರ್ಶೆಯ ಕ್ಷೇತ್ರಗಳಲ್ಲಿಯೂ ಅಪಾರ ಸಾಧನೆ ಗೈದಿದ್ದಾರೆ.
©2024 Book Brahma Private Limited.