ಕ್ಲಬ್ ಹೌಸ್ ಕತೆಗಳು ಜಿ. ಪಿ ರಾಮಣ್ಣ ಅವರ ಸಂಪಾದಿತ ಕೃತಿಯಾಗಿದೆ. ವಿಚಾರಗಳಿಗೆ ಅಪವಾದವಾಗಿ ಕ್ಲಬ್ ಹೌಸನ್ನು ನಮ್ಮ ಕಥಾಪರಂಪರೆ ತಂಡ ಪ್ರಭಾವಶಾಲಿಯಾಗಿ ಬಳಸಿಕೊಂಡು, ದೂರದೂರದ ಹಲವರನ್ನು ಒಂದು ವೇದಿಕೆಗೆ ತರುವ ಮೂಲಕ ಇಡೀ ಜಾಲತಾಣ ಕ್ಷೇತ್ರದಲ್ಲಿಯೇ ಹೊಸದೆನ್ನಬಹುದಾದ ಸಾಹಸವೊಂದಕ್ಕೆ ತೊಡಗಿರುವುದು ಸಂತಸದ ಸುವಿಚಾರ. ಓದಿನ ಅಭಿರುಚಿ ಕಡಿಮೆಯಾಗುತ್ತಿರುವ ಈ ಕಾಲಘಟ್ಟದಲ್ಲಿ ಪ್ರತೀದಿನ (ಭಾನುವಾರ ಹೊರತುಪಡಿಸಿ) ಕನ್ನಡದ ಹಳೆಯ, ಹೊಸಬರ ಕತೆಯೊಂದನ್ನು ತಂದು ಕಥಾಪರಂಪರೆ ವೇದಿಕೆಯಲ್ಲಿ ಓದುವುದು, ಆ ಕತೆಯ ಹೂರಣದ ಬಗ್ಗೆ ಚರ್ಚಿಸುವುದು, ಪರಟುವುದು, ಕಾಲೆಳೆಯುವುದು, ಕಟಕಿಯಾಡುವುದು, ಹಾಗೆಯೇ ಮೆಚ್ಚುವುದು ಎಲ್ಲವೂ ಆರೋಗ್ಯಪೂರ್ಣವಾಗಿ ಜರುಗುತ್ತಿದೆ ಎಂದು ಜಿ.ಪಿ ರಾಮಣ್ಣ ಕ್ಲಬ್ ಹೌಸ್ ಕತೆಗಳು ಪುಸ್ತಕದ ಬಗ್ಗೆ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
©2024 Book Brahma Private Limited.