About the Author

ಜಿ.ಪಿ ರಾಮಣ್ಣ ಮೂಲತಃ ಬೆಂಗಳೂರಿನವರು. ತಂದೆ ಜಿ. ಪಾಪಣ್ಣ ತಾಯಿ ಚೆನ್ನಮ್ಮ ಪ್ರಾಥಮಿಕ ಶಿಕ್ಷಣ ಬೆಂಗಳೂರಿನ ಮಡಿವಾಳದಲ್ಲಿ ಹಾಗೂ ಫ್ರೌಡ ಶಿಕ್ಷಣವನ್ನು ಹೊಂಬೇಗೌಡ ಶಾಲೆಯಲ್ಲಿ ಪೂರ್ಣಗೊಳಿಸಿದರು. ಪದವಿ ವಿದ್ಯಾಭ್ಯಾಸವನ್ನು ಬೆಂಗಳೂರಿನ ವಿಜಯ ಸಂಜೆ ಕಾಲೇಜಿನಲ್ಲಿ ಪೂರೈಸಿ ನಂತರ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್‌ನಲ್ಲಿ ವ್ಯವಸ್ಥಾಪಕ ಹಾಗೂ ಆಡಳಿತಾಧಿಕಾರಿ ಕಾರ್ಯನಿರ್ವಹಿಸಿದರು. ಅನೇಕ ಸಂಘ-ಸಂಸ್ಥೆಗಳ ಪದಾಧಿಕಾರಿಗಳಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಕಳೆದ ಮೂರು ದಶಕಗಳಿಗಿಂತಲೂ ಹೆಚ್ಚು ಕಾಲದಿಂದ ಕರ್ನಾಟಕದ ಸಾಂಸ್ಕೃತಿಕ ವಲಯದಲ್ಲಿ ಗುರುತಿಸಿಕೊಂಡಿರುವ ಜಿ.ಪಿ. ರಾಮಣ್ಣ, ತಮ್ಮ ಅನನ್ಯ ಪ್ರತಿಭೆಯಿಂದ ಸಾಂಸ್ಕೃತಿಕ ಕ್ಷೇತ್ರದ ಸಿರಿವಂತಿಕೆಯನ್ನು ಹೆಚ್ಚಿಸಿ ತಮ್ಮದೇ ಆದ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ. ಕಾರ್ಯಕ್ರಮ ನಿರೂಪಕರಾಗಿ, ಆಕಾಶವಾಣಿಯ ಬಿ-ಹೈ ಶ್ರೇಣಿಯ ಕಲಾವಿದರಾಗಿ,ಕ್ವಿಜ್ ಮಾಸ್ಟರ್ ಮತ್ತು ರಂಗಭೂಮಿ ನಟರಾಗಿ, ನಿರ್ದೇಶಕರಾಗಿ ,ಕಂಠದಾನ ಕಲಾವಿದರಾಗಿ,ಹವ್ಯಾಸಿ ಪತ್ರಕರ್ತನಾಗಿ ಸಾಮಾಜಿಕ ಕಾರ್ಯಕರ್ತರಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ತಮ್ಮ ಸಾಂಸ್ಕೃತಿಕ ಸಂಪನ್ನತೆ ಹಾಗೂ ಸಾಧನೆಗಾಗಿ ನಾಡಿನ ವಿವಿಧ ಸಂಸ್ಥೆಗಳಿಂದ, ಸಾಂಸ್ಕೃತಿಕ ಸಂಘಟನೆಗಳಿಂದ ಪ್ರಶಂಸೆ, ಪುರಸ್ಕಾರ, ಪ್ರಶಸ್ತಿ, ಗೌರವಗಳನ್ನು ಪಡೆದಿದ್ದಾರೆ.

ಪ್ರಶಸ್ತಿಗಳು: ಕೆಂಪೇಗೌಡ ಪ್ರಶಸ್ತಿ, ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ವಿಕಾಸ ರತ್ನ ಪ್ರಶಸ್ತಿ, ವಿಶ್ವಕಲಾರತ್ನ ಪ್ರಶಸ್ತಿ, ಏರ್ ಇಂಡಿಯಾ ಪ್ರಶಸ್ತಿ

ಕೃತಿ : ಕ್ಲಬ್‌ ಹೌಸ್ ಕತೆಗಳು

ಜಿ.ಪಿ ರಾಮಣ್ಣ

(20 Dec 1959)