'ಸಿರ್ವಂತೆ ಕ್ರಾಸ್'

Author : ದಿನೇಶ ಹುಲಿಮನೆ

Pages 96

₹ 120.00




Year of Publication: 2020
Published by: ಎಚ್ಎಸ್.ಆರ್.ಎ ಪಬ್ಲಿಕೇಷನ್ಸ್
Address: ಹೆಚ್, ಎಸ್. ಆರ್. ಎ. ಪ್ರಕಾಶನ 12, ಶ್ರೀ ಅನ್ನಪೂರ್ಣೇಶ್ವರಿ ನಿಲಯ, 1ನೇ ಮುಖ್ಯ ರಸ್ತೆ, ಭೈರವೇಶ್ವರನಗರ, ಲಗ್ಗೆರೆ, ಬೆಂಗಳೂರು- 56058

Synopsys

'ಕಾಪ್ಟನೆಯ ಕಾಲುದಾರಿ" ಯನ್ನು ಪ್ರೋತ್ಸಾಹಿಸಿದ ಓದುಗ ಬಳಗದ ಮುಂದೆ ಹದಿನೆಂಟು ಕಥೆಗಳನ್ನೊಳಗೊಂಡ "ಸರ್ವಂತೆ ಕ್ರಾಸ್" ಎನ್ನುವ ಕಥಾ ಸಂಕಲನವನ್ನು ತರಲು ಲೇಖಕರು ಮುಂದಾಗಿದ್ದಾರೆ. ಹಿಂದೊಮ್ಮೆ ಅವರನ್ನು ನಾನು ಕೇಳಿದ್ದ 'ಮಲೆನಾಡನ್ನು ಬಿಟ್ಟು ನಿಮ್ಮ ಬರಹ ಇರಲಾರದು ಅನಿಸುತ್ತೆ ಅಲ್ವಾ ಅಂತಾ. ಅದಕ್ಕೆ ಅವರು ಹೇಳಿದ್ದು ಮಲೆನಾಡನ್ನು ಬಿಟ್ಟು ಬರಹ ಮಾತ್ರವಲ್ಲ, ಬದುಕು ಕೂಡ ಇಲ್ಲ". ಹಾಗೆಯೇ ಕಥಾ ಸಂಕಲನದಲ್ಲಿ ಬರುವ 'ಮಧ್ಯರಾತ್ರಿಯ ಮಾತು' 'ಸಿರ್ವಂತೆ ಕ್ರಾಸ್ ನಂತಹ ಕಥೆಗಳು ಮಲೆನಾಡಿನ ಬೆಟ್ಟ-ಗುಡ್ಡಗಳನ್ನು ಹತ್ತಿಳಿದು, ಅಂಕು ಡೊಂಕಾದ ಮಣ್ಣು ರಸ್ತೆಗಳಲ್ಲಿ ಸಂಚರಿಸಿದರೆ, 'ಸ್ಮಾರ್ಟ್ ಜಗತ್ತು' 'ಕನ್ನಡದ ಕಂದ' ಮುಂತಾದ ಕಥೆಗಳು ಬೆಂಗಳೂರಿನ ಕಾಂಕ್ರೀಟ್ ಬೀದಿಯಲ್ಲಿ ನುಸುಳುತ್ತವ. ಕುಮಟಾದ ಹಳೇ ಬಸ್ ನಿಲ್ದಾಣ' ಹಾಗೂ 'ಕಡಲ ಮುತ್ತು' ಕಥೆಗಳು ಕರಾವಳಿಯ ಬದುಕನ್ನು ಪರಿಚಯಿಸುವ ಪ್ರಯತ್ನ ಮಾಡಿದರೆ ಇನ್ನುಳಿದ ಕಥೆಗಳು ಮಾನವ ಸಹಜವಾದ ಆಸ ಆತಿ ಆಸ ಪ್ರೀತಿ-ಪ್ರಣಯ, ಜೀವನ-ಜಂಜಾಟ, ಎಡವು-ತೊಡರುಗಳ ಮೇಲೆ ಹಡೆದುಕೊಳ್ಳುತ್ತವ. ವಿಶಿಷ್ಟ ಶೈಲಿಯ ಈ ಎಲ್ಲಾ ಕಥೆಗಳು ಓದುಗರನ್ನು ರಂಜಿಸುವಲ್ಲಿ ಯಶಸ್ವಿಯಾಗುತ್ತವೆ ಎನ್ನುವುದು 'ಕಥೆಗಳ ಆಯ್ಕೆಯಲ್ಲಿ ಪಾಲುದಾರಳಾದ ನನ್ನ ನಂಬಿಕೆ.

About the Author

ದಿನೇಶ ಹುಲಿಮನೆ

ದಿನೇಶ ಹುಲಿಮನೆಯವರು ಮೂಲತಃ ಉತ್ತರ ಕನ್ನಡ ಜಿಲ್ಲೆಯವರು. ಪಶ್ಚಿಮ ಘಟ್ಟದಲ್ಲಿರುವ ಸಿದ್ದಾಪುರ ತಾಲೂಕಿನ ಪುಟ್ಟ ಹಳ್ಳಿ ಹುಲಿಮನೆ ಇವರ ತವರೂರು. ಹಾಸನದ ಮಲ್ನಾಡ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಇ ಪದವಿ ಪಡೆದ ಇವರು ವೃತ್ತಿಯಲ್ಲಿ ಇಂಜಿನಿಯರ್. ಬೆಂಗಳೂರಿನ ಖಾಸಗಿ ಕಂಪನಿಯೊಂದರ ಉದ್ಯೋಗಿಯಾಗಿರುವ ಇವರು, ಪ್ರವೃತ್ತಿಯಲ್ಲಿ ಲೇಖಕರು. ಕಾದಂಬರಿಗಳ ಮೂಲಕ ಜನರ ಮನಸ್ಸನ್ನು ಗೆದ್ದಿರುವ ಇವರು ಸಣ್ಣ ಕಥೆಗಳಲ್ಲೂ ಸೈ ಎನಿಸಿಕೊಂಡಿದ್ದಾರೆ. ಮಲೆನಾಡಿನ ಪ್ರಾಕೃತಿಕ ವರ್ಣನೆ, ಗ್ರಾಮೀಣ ಭಾಷೆಯ ಸೊಗಡು, ಕುತೂಹಲ ಕೆರಳಿಸುವ ಕಥೆಯ ತಿರುವುಗಳು, ಮಾನವ ಸಹಜ ಪ್ರೀತಿ, ಪ್ರಣಯ ಹಾಗೂ ವೈಚಾರಿಕ ವಿಚಾರಗಳನ್ನು ಇವರ ಬರಹಗಳಲ್ಲಿ ಕಾಣಬಹುದಾಗಿದೆ. ಕಾದಂಬರಿಗಳಲ್ಲಿ ...

READ MORE

Related Books