‘ನಾಟಕೀಯ’ ಪ್ರೇಮಕುಮಾರ್ ಹರಿಯಬ್ಬೆ ಅವರ ಕಥಾಸಂಕಲನವಾಗಿದೆ. ಸಾಮಾನ್ಯರ ಬದುಕು, ಕಷ್ಟಗಳು, ಗ್ರಾಮೀಣ ಪರಿಸರಗಳನ್ನು ಈ ಕಥೆಗಳು ಕಟ್ಟಿಕೊಡುತ್ತವೆ. ಗ್ರಾಮೀಣ ಜನರು ಘನತೆವೆತ್ತ ಬದುಕು ಕಟ್ಟಿಕೊಳ್ಳುವಾಗ ತೊಡಕಾಗುವ ರಾಜಕೀಯ ಹುನ್ನಾರಗಳನ್ನು ಬಯಲಾಗಿಸುತ್ತವೆ. ಕಥೆಗಳಲ್ಲಿ ಕೆಂಡದಂಥ ವಾಸ್ತವಗಳಿವೆ. ಕರುಳಿಗೆ ತಂಪೆನಿಸುವ ವಾತ್ಸಲ್ಯವೂ ಇದೆ. ಹರಿಯಬ್ಬೆ ಅವರ ಕಥನ ಕೌಶಲ, ವಸ್ತುವಿನ ಆಯ್ಕೆ, ಸಂಕೀರ್ಣವಾದದ್ದನ್ನೂ ಸರಳವಾಗಿ ನಿಭಾಯಿಸುವ ಬಗೆಯೇ ಅಚ್ಚರಿ, ಅಬ್ಬರಿಸದೆ, ಘೋಷಿಸದೆ, ಗೊಣಗದೆ ಆಪಾದಿಸಲೋ ಒಲ್ಲದ ಒಂದು ಸಂವೇದನಾಶೀಲ ಮನಸ್ಸು ಕತೆಗಳನ್ನು ಕಟ್ಟುತ್ತದೆ. ಫಲಾಪೇಕ್ಷೆ ಇಲ್ಲದೆ ಅಪರೂಪವೆನಿಸುವ ಶುದ್ಧಮನಸ್ಸಿನ ಒಳಗೆ ಓಡಾಡುವ ಪಾತ್ರಗಳು, ಇಲ್ಲಿ ಮಾತನಾಡುತ್ತವೆ ಕಾಡುತ್ತವೆ.
©2024 Book Brahma Private Limited.