ಲೇಖಕ ತಿರುಪತಿ ಭಂಗಿ ಅವರ ಕಥಾ ಸಂಕಲನ ಕೃತಿ ʻನಾಯಿ ಹೆಜ್ಜೆಯ ಗುರುತುʼ. ಮನುಷ್ಯನ ವಿಕೃತ ಮನೋಭಾವವನ್ನು ಇಲ್ಲಿನ ಕತೆಗಳು ಹೇಳುತ್ತವೆ. ಊರಿನ ಧಣಿಯ ಬೆಲೆಬಾಳುವ ಹೆಣ್ಣು ನಾಯಿಯನ್ನು ಕೆಳ ಜಾತಿಯ ಗಂಡು ನಾಯಿ ಸುಖಿಸಿದ್ದು ಕಂಡು ಮುಂದೆ ಅದು ಗರ್ಭ ಧರಿಸಿದರೆ ಎಂಬ ಚಿಂತೆ ಧಣಿಗೆ. ಅದಕ್ಕಾಗಿ ಆ ಗಂಡು ನಾಯಿಯನ್ನೇ ಕೊಲ್ಲುವ ಧಣಿ ಸಮಾಜದ ಕೆಟ್ಟ ವ್ಯವಸ್ಥೆಗೆ ಸಾಕ್ಷಿಯಾಗುತ್ತಾನೆ. ಹೀಗೆ ಮೇಲ್ಜಾತಿಯ ಬೂಟಾಟಿಕೆ, ದರ್ಪ, ಪೌರುಷ ಮತ್ತು ಅವುಗಳಿಗೆ ಪ್ರತಿಯಾಗಿ ಶೋಷಣೆಗೆ ಒಳಗಾಗುವವರ ಅಸಹಾಯಕತೆ, ಆತಂಕ ಎಲ್ಲವುಗಳ ಸಂಕೇತವಾಗಿ ಈ ಕಥೆಯನ್ನು ಲೇಖಕರು ಹೆಣೆದಿದ್ದಾರೆ.
©2024 Book Brahma Private Limited.