ಈ ಬದುಕೇ, ವಿಚಿತ್ರ, ತೆರೆಮರೆಯ ಸತ್ಯಗಳು, ಮರೆಯಲ್ಲಿರಬೇಕಾದ ಸೌಂದರ್ಯ ಹೊರಗೆ ಬಂದರೆ ವಿಕಾರವಾಗುತ್ತದೆ. ಬದುಕು ನಲುಗುತ್ತದೆ. ದೀಪದ ಕೆಳಗಿನ ಕತ್ತಲೆಯಂತೆ ಪ್ರಸಿದ್ಧ ವ್ಯಕ್ತಿಯ ಗತ ಇತಿಹಾಸ, ಕುಟುಂಬ ವಾತ್ಸಲ್ಯ ಸದಾ ಉನ್ನತವಾಗಿರುವುದಿಲ್ಲ. ಅವರ ಸಂಗಾತಿಯ ಮಾತು ಬದುಕಿನ ಇನ್ನೊಂದು ಮುಖಕ್ಕೆ ಕನ್ನಡಿ ಹಿಡಿಯಬಲ್ಲುದು. ಎಕೆಂದರೆ ಈ ಬದುಕು ಮೂರು ಗಂಟೆಗಳ ಕಾಲ ನೋಡಿ ಹೊರಬರುವ ಸಿನಿಮಾ ಅಲ್ಲ.. ಜೀವನ, ಉದ್ದಕ್ಕೂ ಪರಸ್ಪರ ಅರಿತು.. ಹೊಂದಿಕೊಂಡು ಸಾಗಿಸಬೇಕಾದ ಬದುಕು. ಬೇಲಿಯೇ ಎದ್ದು ಹೊಲವನ್ನು ಮೇಯ್ದರೆ ಜನಕರಾಜನ ಕುವರಿಯಂತೆ.. ಕಷ್ಟ ಅನುಭವಿಸ ಬೇಕಾಗಬಹುದು. ಬಾಳನ್ನೆಲ್ಲ ಪರರಿಗಾಗೇ ತೇಯ್ದರೂ ಕೊನೆಗೆ ಉಳಿಯುವುದು ರಾಮನ ಜಪವೊಂದೇ. ಆದರೆ ಪರರ ಬದುಕು ಕಟ್ಟಿಕೊಡಲು ಕೆಲವೊಮ್ಮೆ ನಾಟಕವಾಡುವ ಪರಿಸ್ಥಿತಿ ಬರಬಹುದು. ಎಲ್ಲ ವಿಸ್ಮತಿಯಾಗಿ ತಿರುಗಿ ಸ್ಮೃತಿ ಬಂದು ಜೀವನವೆಂಬ ನಾಟಕರಂಗದಲ್ಲಿ ಪ್ರವೇಶ ಮಾಡುವಂತೆ.. ಎಂದು ಲೇಖಕಿ ತಮ್ಮ ಕೃತಿಯಲ್ಲಿ ಬರೆದುಕೊಂಡಿದ್ದಾರೆ. (ಆಯ್ದ ಭಾಗದಿಂದ)
©2024 Book Brahma Private Limited.