'ದೀಡೆಕರೆ ಜಮೀನು' ಮಲ್ಲಿಕಾರ್ಜುನ ಶೆಲ್ಲಿಕೇರಿ ಅವರ ಕಥಾಸಂಕಲನ. ಮಹಾಪೂರ ಕಥೆ ತುಂಬಾ ವಾಸ್ತವವಾಗಿ ಹೆಣೆದ ಕತೆಯಾಗಿದೆ. ಭೋರ್ಗರೆಯವ ಚಂದ್ರಪ್ರಭ ನದಿಯ ಮೂಲಕ ಕಥಾನಕದ ದ್ರವ್ಯ ನವಿರಾಗಿ ಜಿನುಗುತ್ತ ಸಾಗುತ್ತದೆ. ಮಹಾಪೂರದಿಂದ ಉಂಟಾದ ಜಂಜಾಟವೇ ಇಲ್ಲಿ ಕತೆಯ ಮೂಲ ದ್ರವ್ಯವಾಗಿದೆ. ನರಿತ ಕುಶಲ ಕತೆಗಾರರಾದ ಮಲ್ಲಿಕಾರ್ಜುನ ಶೆಲ್ಲಿಕೇರಿ ಅವರು ತುಂಬಾ ಜಾಣ್ಮೆ ಹಾಗೂ ನಾಜೂಕಿನಿಂದ ಕತೆಯನ್ನು ಹೆಣೆದು ನವಿರಾಗಿ ನಿರೂಪಣೆ ಮಾಡಿದ್ದಾರೆ. ಚಂದ್ರಪ್ರಭ ನದಿಯ ಮಹಾಪೂರದಿಂದ ಸದಾ ಬದುಕಿನ ಭರವಸೆ ಕಳೆದುಕೊಳ್ಳುವ ರುದ್ರಾಪೂರದ ಜನತೆಯ ಆತಂಕ, ಜನ, ಜಾನುವಾರಗಳ ಮೂಕರೋಧನ, ಪ್ರಶಾಂತ ದೇಸಾಯಿಯವರಂಥ ಅಷಾಢಭೂತಿಗಳ ಸ್ವಾರ್ಥ ಮತ್ತು ಸಮಯ ಸಾಧಕತನ ಇಲ್ಲಿ ತುಂಬಾ ಮೊನಚಾಗಿ ತೆರೆದುಕೊಂಡಿವೆ. ದೇಸಾಯಿಯಂತಹ ರಾಜಕಾರಣಿ ಹಾಗೂ ರುದ್ರಾಪೂರದಂಥ ಹಳ್ಳಿಯನ್ನು ಸಾಂಕೇತಿಕವಾಗಿ ಬಳಸಿಕೊಂಡು, ಗೋಸುಂಬೆಯಂತಹ ರಾಜಕಾರಣಿಗಳು ಹೇಗೆ ಕಾಲಕಾಲಕ್ಕೆ ಬಣ್ಣ ಬದಲಾಯಿಸುತ್ತಾರೆ ಎಂಬುದನ್ನು ಕತೆಯಲ್ಲಿ ಸಾಬೀತುಪಡಿಸಿದ್ದಾರೆ ಎನ್ನುತ್ತಾರೆ ಯಶವಂತ ಹರಗಿ ಪುಸ್ತಕದ ಬಗ್ಗೆ ಅಭಿಪ್ರಾಯಪಟ್ಟಿದ್ದಾರೆ.
©2024 Book Brahma Private Limited.