ಬೀದಿ ಹೆಣ್ಣು ದು.ಸರಸ್ವತಿ ಅವರ ಕೃತಿಯಾಗಿದೆ. ಕತ್ತಲೆಯ ಲೋಕದಲ್ಲಿ ಸಪೂರ ದೇಹಕ್ಕೆ ಮಾತ್ರ ಬೆಲೆಹೆಚ್ಚು. ಸ್ವಲ್ಪ ವಯಸ್ಸಾದರೂ ಎಲ್ಲರೂ ತಿರಸ್ಕರಿಸಿ ಮುನ್ನಡೆಯುವರು. ಪೈಲ್ವಾನರ ಮಾತುಗಳು ಗಿರಿಜೆಗೆ ಸಹಿಸಲಸಾಧ್ಯವಾದವು. ಆದರೂ ಮಗನ ನೋಡುವ ಬಯಕೆಯಿಂದ ರೈಲಿಗೆ ಹೊರಡಲು ಹಣ ಕೂಡಿಸಬೇಕಿರುವುದರಿಂದ ಆ ನೋವುಗಳನ್ನು ಸಹಿಸಿಕೊಂಡು ಮತ್ತೆ ಯಾರಾದರೂ ಬರುವರೇ ಎಂದು ಕಾಯುತ್ತಾ ನಿಲ್ಲುವಳು. ಕತ್ತಲೆಲೋಕದಲ್ಲೂ ಬಡತನದ ಬೇಗೆಯಲ್ಲಿ ಬೇಯುವ ಮಹಿಳೆಯ ಕಣ್ಣೀರ ಕತೆ ಓದುಗರ ಮನಸ್ಸನ್ನು ವಿಚಲಿತಗೊಳಿಸಿ ಮನಸ್ಸನ್ನು ಆರ್ದಗೊಳಿಸುತ್ತದೆ.
©2024 Book Brahma Private Limited.