ಬಾಲಕ ಮತ್ತು ಕಾರಂತಜ್ಜ ಸಂತೇಕಡೂರು ಅವರು ಈ ಪುಸ್ತಕದಲ್ಲಿ 8 ಕಥೆಗಳನ್ನು ಹೇಳಿದ್ದಾರೆ. ಅದರಲ್ಲಿ ನನಗೆ ಎಲ್ಲಾ ಕಥೆಗಳೂ ಇಷ್ಟವಾದವು. ಆದರೂ ಅದರಲ್ಲಿ ನನಗೆ ಮುದ ನೀಡಿದ ಕಥೆ "ಬಾಲಕ ಮತ್ತು ಕಾರಂತಜ್ಜ" ಶೀರ್ಷಿಕೆ ಹೆಸರಿನ ಕಥೆ. ಹಳ್ಳಿಗಾಡಿನಲ್ಲಿ ಬೆಳೆದ ಬಾಲಕನೊಬ್ಬ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುತ್ತಾನೆ. ಅವನು ಶಾಲೆಯಲ್ಲಿ ನಡೆಯಲಿರುವ ವಾರ್ಷಿಕೋತ್ಸವಕ್ಕೆ ಶ್ರೀ ಶಿವರಾಮ ಕಾರಂತರು ಮುಖ್ಯ ಅತಿಥಿಗಳಾಗಿ ಬರುತ್ತಿದ್ದಾರೆ ಎಂದು ಶಿಕ್ಷಕಿಯವರಿಂದ ತಿಳಿಯುತ್ತಾನೆ. ಕಾರಂತಜ್ಜರ ಅಭಿಮಾನಿಯಾದ ಈ ಬಾಲಕ ಅವರು ಬಂದಾಗ ಅವರಿಗೆ ಪ್ರಶ್ನೆಗಳನ್ನು ಕೇಳಬೇಕು. ಅವರಿಂದ ಸಮಂಜಸ ಉತ್ತರಗಳನ್ನು ಪಡೆಯಬೇಕು. ಅವರೊಡನೆ. ಮಾತನಾಡಬೇಕು ಮತ್ತು ಅವರೊಂದಿಗೆ ಫೋಟೋ ತೆಗೆಸಿಕೊಳ್ಳಬೇಕೆಂದು ಇಚ್ಛಿಸುತ್ತಾನೆ .ಹಾಗೇಯೇ ಕಾರಂತಜ್ಜನೊಂದಿಗೆ ಪ್ರಶ್ನೆಗಳನ್ನು ಕೇಳುತ್ತಾನೆ. ಅವರನ್ನ ಆಶ್ಚರ್ಯಗೊಳಿಸುತ್ತಾನೆ ಮತ್ತು ಸಂತೋಷಪಡಿಸುತ್ತಾನೆ. ಆ ಮುಗ್ಧ ಬಾಲಕನ ಪ್ರಶ್ನೆ "ಬಿಗ್ ಬ್ಯಾಂಗ್" ಎಂದರೇನು? ಎನ್ನುವುದಾಗಿರುತ್ತದೆ. ಇದು ಸೃಷ್ಠಿಯ ಪ್ರಾರಂಭದಲ್ಲಿ ನಭೋಮಂಡಲದಿಂದ ಹೊರಹೊಮ್ಮಿದ ಒಂದು ಬೃಹತ್ ಶಬ್ಧವಾಗಿದೆ ಎಂದು ಎಂ.ಜಿ.ವಾಮದೇವಯ್ಯ ಪುಸ್ತಕದ ಬಗ್ಗೆ ಅನಿಸಿಕೆ ತಿಳಿಸಿದ್ದಾರೆ.
©2024 Book Brahma Private Limited.