'ಅಪ್ಪ ಕಾಣೆಯಾಗಿದ್ದಾನೆ' ಬೇಲೂರು ರಘುನಂದನ್ ಅವರ ಕಥಾಸಂಕಲನವಾಗಿದೆ. ಒಂಬತ್ತು ಕತೆಗಳಿರುವ ಈ ಸಂಕಲನದ ಶೀರ್ಷಿಕೆಯೂ ಆಗಿದೆ. ಆ ಬಾಲಕನ ಬಾಯಲ್ಲಿ ಬರುವ ಮಾತು ಸಂಕಲನದ ಕತೆಗಳಲ್ಲಿ ಗುಪ್ತವಾಗಿ ಅಣುರಣಿಸುತ್ತದೆ. ಒಂದೆರಡು ಅಪವಾದಗಳಿದ್ದರೂ ಸಂಕಲನದ ಬಹುತೇಕ ಕಥೆಗಳಲ್ಲಿ ಗಂಡ, ಅಪ್ಪ, ಮಗ ಮುಂತಾಗಿ ಕರೆಯಲಾಗುವ 'ಪುರುಷ' ಕುಲವೇ ಕಣ್ಮರೆಯಾಗಿದೆ. ಕಥಾ ನಿರೂಪಣೆಯಲ್ಲಿ ಈ ಅದೃಶ್ಯ ಪುರುಷ ಕ್ವಚಿತ್ತಾಗಿ ಕಾಣಿಸಿಕೊಂಡರೂ ನಾಪತ್ತೆಯಾಗಿರುತ್ತಾನೆ ಅಥವಾ ಹಿನ್ನೆಲೆಗೆ ಸರಿದಿರುತ್ತಾನೆ. ಈ ದೃಷ್ಟಿಯಿಂದ ಬೇಲೂರು ರಘುನಂದನ್ ಅವರ ಪ್ರಸ್ತುತ ಸಂಕಲನದ ಕಥೆಗಳನ್ನು ಸ್ತ್ರೀ ಕೇಂದ್ರಿತ ಕಥೆಗಳೆಂದೇ ಕರೆಯಬಹುದಾಗಿದೆ.
©2024 Book Brahma Private Limited.