ನೂರ್ ಜಹಾನ್ ಬರೆದಿರುವ 11 ಕಥೆಗಳಲ್ಲಿ ಕೆಲವು ನನ್ನ ಮನಸಿಗೆ ತುಂಬಾ ಹಿಡಿಸಿದ ಕಥೆಗಳಾಗಿವೆ, ಕೆಲವು ಕಥೆಗಳಂತು, ಕಥೆಗಾರ್ತಿ ತನ್ನ ಅನುಭವದ ಮೂಸೆಯಿಂದ ಒಡಮೂಡಿ ಬರೆದಿರುವುದು ನನ್ನ ಮನಸಿಗೆ ಬಹಳ ಹಿಡಿಸಿತು, ಕಥೆಯ ವಸ್ತುಗಳಿಗಾಗಿ ಕಥೆಗಾರ್ತಿ ಹುಡುಕಾಡುವ ಸಂದರ್ಭಗಳು ಇಲ್ಲದಂತೆ ತನ್ನ ಬದುಕಿನ ಜೊತೆ ಜೊತೆಗೆ ತನ್ನ ಅಕ್ಕ ಪಕ್ಕದ ಬದುಕುಗಳ ವಾಸ್ತವತೆಗಳ ವಸ್ತುಗಳನ್ನೇ ಆಧಾರವಾಗಿಟ್ಟುಕೊಂಡು ನೈಜತೆಯನ್ನು ಕಥೆಗಳಾಗಿ ಅಕ್ಷರ ರೂಪಕ್ಕೆ ಭಟ್ಟಿ ಇಳಿಸುವಲ್ಲಿ ಕಥೆಗಾರ್ತಿಯ ಜಾಣ್ಮೆ ಬಹು ದೊಡ್ಡ ಗುಣವೆಂದು ನನ್ನ ಭಾವನೆ, "ಅನುಮಾನ" ಕಥೆಯಲ್ಲಿ ಬರುವ ಗಂಡ ತಾನೇ ಪ್ರೀತಿಸಿ ಮದುವೆಯಾದ ಹೆಂಡತಿಯನ್ನು ಅನುಮಾನಿಸಿ, ಕೊನೆಗೆ ತಾನೇ ಪರಿವರ್ತನೆಯಾಗಿ ಹೆಂಡತಿ ಸುಜಾತಳಲ್ಲಿ ಕ್ಷಮೆಯಾಚಿಸಿ, ಆಕೆಯ ನಿಜ ಪ್ರೀತಿಯನ್ನು ಒಪ್ಪಿಕೊಂಡದ್ದು, ಎರಡನೇ ಕಥೆ ಬುರ್ಖಾದಲ್ಲಿ ಬರುವ ತಾಹಿರಾ ಆರು ಮಂದಿಯೊಂದಿಗೆ ಕೊನೆಯ ಮಗಳಾಗಿ ಬೆಳೆದು, ತಂದೆಯ ಎರಡನೆಯ ಹೆಂಡತಿಯ ಅಕ್ಕರೆಯಲ್ಲಿ ಬೆಳೆದು, ಮದುವೆಯಾದ ನಂತರ ಜೀವನ ಏನು ಎನ್ನುವುದು ಅರಿಯದೇ, ಗಂಡ ಸಾಲ ಮಾಡಿ ಬಿಟ್ಟುಹೋದಾಗ ತವರುಮನೆ ಸೇರಿ ಮತ್ತೇ ಅಲ್ಲಿ ಜೀವನ ನಡೆಸಲು ಹೆಣಗಾಡಿ, ತನ್ನ ಮುಂದಿನ ಬದುಕನ್ನು ಬಾಳಲು ನೌಕರಿಗಾಗಿ ಅಲೆದು, ಕೆಲಸ ಸಿಗದೇ ನಿರಾಶಳಾಗಿದ್ದಾಗ, ಮತ್ತೇ ಅದೇ ಗಂಡನ ಕರೆಯೋಲೆಯಿಂದ ಸಂತೋಷಗೊಂಡು ಮತ್ತೇ ತನ್ನ ಜೀವನಕ್ಕೆ ಮರಳುವುದು, ಹೀಗೆ ಬದುಕಿನ ಕಷ್ಟನಷ್ಟಗಳನ್ನು ಕಥೆಗಾರ್ತಿ ಎಳೆ ಎಳೆಯಾಗಿ ಹೆಣೆದಿರುವುದು ಜೀವನದ ಪರಿಸ್ಥಿತಿಯ ಸ್ಥಿತಿಗತಿಗಳಿಗೆ ಪ್ರತ್ಯಕ್ಷ ಸಾಕ್ಷಿಯಾಗಿದೆ ಎನ್ನುತ್ತಾರೆ ಎನ್, ಡಿ, ವೆಂಕಮ್ಮ.
©2024 Book Brahma Private Limited.