ಲೇಖಕ ಎಂ.ಎಸ್.ಕೆ. ಪ್ರಭು ಅವರು (ಮಂದಗೆರೆ ಸೀತಾರಾಮಯ್ಯ ಕೇಶವ ಪ್ರಭು) ಎಂದೇ ಪ್ರಸಿದ್ಧರು. ಮಂಡ್ಯ ಜಿಲ್ಲೆಯ ಕೃಷ್ಣರಾಜ ಪೇಟೆ ತಾಲ್ಲೂಕಿನ ಮಂದಗೆರೆ ಗ್ರಾಮದವರು. ತಂದೆ ಸೀತಾರಾಮಯ್ಯ, ತಾಯಿ ಸೀತಮ್ಮ. ಪ್ರಭು ಅವರ ಪ್ರಾಥಮಿಕ ಶಿಕ್ಷಣ ಮಂದಗೆರೆ ಹಾಗೂ ಹೊಳೆನರಸೀಪುರಗಳಲ್ಲಿ, ಪ್ರೌಢಶಿಕ್ಷಣವನ್ನು ಮೈಸೂರಿನಲ್ಲಿ ನಂತರ ಮೈಸೂರು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಮೊದಲ ದರ್ಜೆಯಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಬೆಂಗಳೂರಿನ ಅಕೌಂಟೆಂಟ್ ಜನರಲ್‌ರವರ ಕಚೇರಿಯಲ್ಲಿ.(1961ರಿಂದ 1977) ಕಾರ್ಯನಿರ್ವಹಿಸಿ, ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಹಣಾ ಅಧಿಕಾರಿಗಳಾಗಿದ್ದು, ಭದ್ರಾವತಿ, ಧಾರವಾಡ, ಬೆಂಗಳೂರು ಕೇಂದ್ರಗಳಲ್ಲಿ ಸೇವೆ ಸಲ್ಲಿಸಿ, 1996ರಲ್ಲಿ ನಿವೃತ್ತರಾದರು. ಹಲವಾರು ಶಬ್ಧ ಚಿತ್ರಗಳನ್ನೂ ನಿರ್ಮಿಸಿದ್ದು ಅವುಗಳಲ್ಲಿ ಐನ್‌ಸ್ಟೀನ್‌ರ ‘ಸಂಸಾರಾಲಯ’ ಮತ್ತು ‘ಅವತಾರ’ ಮುಖ್ಯವಾದವು.
ಕೃತಿಗಳು : ಬೆತ್ತಲೆ ಅರಸನ ರಾಜ ರಹಸ್ಯ (1981), ಮುಖಾಬಲೆ (1991), ವಿದೇಶಿಕತೆಗಳು(1997) (ಈ ಎಲ್ಲವು ಕಥಾ ಸಂಕಲನಗಳು). .ಕಾಣೆಯಾದ ಟೋಪಿ (ವಿವಿಧ ಭಾಷೆಯ ಅನುವಾದಿತ ಕಥೆಗಳು), ಬಕ, ಮಹಾಪ್ರಸ್ಥಾನ, ಸಿಸೆರೊ, ಬೆತ್ತಲೆ ಅರಸನ ರಾಜರಹಸ್ಯ, ಮುಖಾಬಿಲೆ ಹಾಗೂ ಒಳ್ಳೆಯ ಸಮಯ ಮತ್ತು ಇತರ ನಾಟಕಗಳು (ಇವು ನಾಟಕ ಕೃತಿಗಳು), ಸಾಹಿತ್ಯದಲ್ಲಿ ಫ್ಯಾಂಟಸಿ (ಪ್ರಬಂಧ ಸಂಕಲನ) ಮೂಗಿನ ಕತೆ (1998) ಮತ್ತು ಪತ್ತೆದಾರಿ ಕತೆಗಳ ಸಂಗ್ರಹ ಶೋಧ (2000) -ಇವು ಸಂಪಾದಿತ ಕೃತಿಗಳು. ‘ಪೋಕರಿಪಾಪಣ್ಣನ ಪರಾಕು’.(ಮಕ್ಕಳಿಗಾಗಿ ರಚಿಸಿದ ಕೃತಿ).
ಪ್ರಶಸ್ತಿ-ಪುರಸ್ಕಾರಗಳು: ‘ಬಕ’ ನಾಟಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡಮಿಪ್ರಶಸ್ತಿ (1975), ಮತ್ತು ವರ್ಧಮಾನ ಉದಯೋನ್ಮುಖ ಪ್ರಶಸ್ತಿ(1982); ಸಿಸಿರೊ ನಾಟಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ (1995), ಸಮತೆಂತೋ ನಾಟಕ ರಚನಾ ಸ್ಫರ್ಧೆಯಲ್ಲಿ ಮೂರನೆಯ ಬಹುಮಾನ, ‘ಕುರಿತೇಟು’ ನಾಟಕಕ್ಕೆ ಆಕಾಶವಾಣಿಯ ವಾರ್ಷಿಕ ಪ್ರಶಸ್ತಿ ಮುಂತಾದ ಹಲವಾರು ಬಹುಮಾನ, ಪ್ರಶಸ್ತಿ, ಗೌರವಗಳು lಲಭಿಸಿವೆ.
ಎಂ.ಎಸ್.ಕೆ. ಪ್ರಭು ಅವರು 2000ದ ಜನವರಿ 25ರಂದು ನಿಧನರಾದರು.