ಲೇಖಕಿ ಪ್ರಿಯಾ ಭಟ್ ಅವರು ಹುಟ್ಟಿದ್ದು ಅಪ್ಪಟ ಕಾಡಿನ ಊರಾದ ಅಂಕೋಲಾ ತಾಲೂಕಿನ ಹಳವಳ್ಳಿ. ಗ್ರಾಮದಲ್ಲಿ.ಸ್ವಂತಕ್ಕೊಂದು ಸಣ್ಣ ಉದ್ಯೋಗವನ್ನು ಕುಮಟಾ ಪೇಟೆಯಲ್ಲಿ ಸ್ಥಾಪಿಸಿದ್ದಾರೆ. ಅದರೊಂದಿಗೆ ‘ಸ್ವಸ್ತಿ ಪ್ರಕಾಶನ’ ಸಂಸ್ಥೆಯನ್ನು 2013ರಿಂದ ನಡೆಸುತ್ತ ಬಂದಿದ್ದು, ಎರಡು ಕೃತಿಗಳನ್ನು ರಚಿಸಿದ್ದಾರೆ. ರಾಜ್ಯಮಟ್ಟದ ಸ್ಪರ್ಧೆಗಳನ್ನು ನಡೆಸುತ್ತ ಬಹುಮಾನಿತರ ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾರೆ.