ಪಂಚಾಮೃತ

Author : ಬಿ.ಎಸ್. ರುಕ್ಕಮ್ಮ

₹ 10.00




Published by: ನ್ಯಾಷನಲ್ ಬುಕ್ ಟ್ರಸ್ಟ್
Address: ನವದೆಹಲಿ

Synopsys

ಬಿ.ಎಸ್.‌ ರುಕ್ಕಮ್ಮ ಅವರ ಮಕ್ಕಳ ಕತೆಗಳ ಸಂಕಲನ ಕೃತಿ ʻಪಂಚಾಮೃತʼ. ಎನ್.‌ ಪ್ರಹ್ಲಾದ ರಾವ, ಪ.ವಿ. ಚಂದ್ರಶೇಖರ ಸೇರಿದಂತೆ ವಿವಿಧ ಲೇಖಕರು ಬರೆದ ಒಟ್ಟು ಹತ್ತು ಕತೆಗಳನ್ನು ಪ್ರಸ್ತುತ ಪುಸ್ತಕ ಒಳಗೊಂಡಿದೆ. ಅತ್ತೆ-ಸೊಸೆ ಜಗಳ, ಮೂರ್ಖತನ, ಮದುವೆ ಮುಂತಾದ ಲಘು ಕತೆಗಳೊಂದಿಗೆ ಚಿತ್ರದುರ್ಗದ ಕೋಟೆಗೆ ಸಂಬಂಧಿಸಿದ ಚಾರಿತ್ರಿಕ ಮತ್ತು ಜಾನಪದದ ದೀರ್ಘ ಕತೆಗಳು, ಹಕ್ಕಿಗಳ ಬಗೆಗಿನ ಕುತೂಹಲಕಾರಿ ಸಂಗತಿಗಳನ್ನೂ ಇಲ್ಲಿನ ಕತೆಗಳು ಹೇಳುತ್ತವೆ. ಪರಿವಿಡಿಯಲ್ಲಿ ಜಾಣರು ತೋಡಿದ ಬಾವಿ, ಶ್ರೀಮಂತೆ ಆರಿಸಿಕೊಂಡ ಹುಡುಗಿ, ಮಳೆರಾಯನ ಗುಟ್ಟು, ಪೂರ್ಣಿಮಾ ಚಂದ್ರಲೋಕಕ್ಕೆ ಹೋದದ್ದು, ಸಿಗಡಿ ಯಾಕೆ ಒಣಗಲಿಲ್ಲ?, ಮೇಲುದುರ್ಗದ ನೋಟ, ಮಿಂಚುಳ್ಳಿ, ಆಡಿನ ಆಟ, ಹಾಗೂ ತೋಳ ಮತ್ತು ತುಂಟಿ ಶೀರ್ಷಿಕೆಗಳ ಕತೆಗಳಿವೆ.

About the Author

ಬಿ.ಎಸ್. ರುಕ್ಕಮ್ಮ

ರುಕ್ಕಮ್ಮ ಬಿ.ಎಸ್. ಅವರು  ಎಂ.ಎ.(ಕನ್ನಡ) ಸ್ನಾತಕೋತ್ತರ ಪದವೀಧರರು. ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ್ದಾರೆ. ೨೩-೯-೧೯೩೪ ರಂದು ಮೈಸೂರಿನ  ಬಿ.ಟಿ. ಶ್ರೀನಿವಾಸ ಐಯ್ಯಂಗಾರ್, ಸೀತಮ್ಮ ದಂಪತಿಗಳಿಗೆ ಮಗಳಾಗಿ ಜನಿಸಿದರು. ಇವರ  ಕೃತಿಗಳು : ಶಾಲೆಯ ಮಕ್ಕಳು (ಕಾದಂಬರಿ) ೧೯೫೮. ಅನುವಾದ: ಕೀಟಗಳ ಒಡನಾಡಿ ಫೇಬರ್‌ ಜೀವನ ಮತ್ತು ಕೃತಿ ೧೯೬೦, ಸಮ್ಮುಕ್ತ ಕೌಮುದೀ ಸಂಗ್ರಹ (ಸಂಪಾದಿತ) ೧೯೬೩, ಮೇರಿಕ್ಯೂರಿ ಜೀವನ ಚರಿತ್ರೆ ೧೯೬೮, ಪಾಪು ಅಮ್ಮನಿಗೆ ಹೇಳಿದ ಕಥೆಗಳು (ಮಕ್ಕಳ ಸಾಹಿತ್ಯ) ೧೯೭೧, ಕಚ (ವ್ಯಕ್ತಿಚಿತ್ರ) ೧೯೭೩, ಹರಿಹರ ೧೯೭೩, ವ್ಯಾಪಾರಿ ನುಂಗಣ್ಣ (ಮಕ್ಕಳ ಸಾಹಿತ್ಯ) ...

READ MORE

Related Books