`ಕೆರೂರು ವಾಸುದೇವಾಚಾರ್ಯ ಸಮಗ್ರ ಸಂಪುಟ-3’ ಕೃತಿಯು ಎಂ.ಎಂ ಕಲಬುರ್ಗಿಯವರು ಪ್ರಧಾನವಾಗಿ ಸಂಪಾದಿಸಿದ ಸಣ್ಣ ಕಥಾ ಸಂಪುಟ ಕೃತಿಯಾಗಿದೆ. ಕೃತಿಯನ್ನು ಶ್ಯಾಮಸುಂದರ ಬಿದರಕುಂದಿ, ರಮಾಕಾಂತ ಜೋಶಿ ಹಾಗೂ ಜಿ.ಎಂ ಹೆಗಡೆ ಅವರು ಸಂಪಾದಿಸಿದ್ದಾರೆ. ಕಥಾ ಸಂಪುಟವನ್ನು ಮೂರು ಸಂಪುಟವಾಗಿ ವಿಭಾಗಿಸಿದ್ದು ಸಂಪುಟ 1 ರಲ್ಲಿ ನಲದಮಯಂತಿ, ವಸಂತ ಯಾಮಿನೀ ಸ್ವಪ್ನ ಶ್ರೇ಼ಷ್ಠಿ, ಪತಿವಶೀಕರಣ, ರುಕ್ಮಿಣೀ ಹರಣ, ಪುರಂದರ ದಾಸ ನಾಟಕ, ರಮೇಶ ಲಲಿತಾ (ಅಪೂರ್ಣಗಳನ್ನು ಒಳಗೊಂಡಿದೆ). ಸಂಪುಟ-2 ಕಾದಂಬರಿ ಸಂಪುಟದಲ್ಲಿ ಇಂದಿರಾ, ಯದುಮಹಾರಾಜ, ಭ್ರಾತೃಘಾತಕನಾದ ಔರಂಗಜೇಬ, ಯವನ ಸೈರಂಧ್ರೀ, ವಾಲ್ಮೀಕಿ ವಿಜಯವನ್ನು ಒಳಗೊಂಡಿದೆ. ಸಂಪುಟ-3ರಲ್ಲಿ ಸಣ್ಣ ಕಥಾಸಂಪುಟ ವಿಭಾಗದಲ್ಲಿ ಪ್ರೇಮ ವಿಜಯ, ತೊಳೆದ ಮುತ್ತು, ಬೆಳಗಿದ ದೀಪಗಳನ್ನು ಒಳಗೊಂಡಿದೆ. ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಜಿ. ಬಿ. ಜೋಶಿಯವರ ಬಾಗಲಕೋಟೆಯ ಸಂಬಂಧ ಬಹಳ ಹಳೆಯದು; ಅವರ ಶಾಲಾ ದಿನಗಳಿಂದಲೂ ಇದ್ದದ್ದು. ಒಮ್ಮೆ ಬಾಗಲಕೋಟೆಯ ಸ್ನೇಹಿತರೆಲ್ಲರೂ ಸೇರಿ ಕೆರೂರ ವಾಸುದೇವಾಚಾರ್ಯರ ಆತ್ಮವನ್ನು 'ಪ್ಲಾಂಚೆಟ್'ನಲ್ಲಿ ಆಹ್ವಾನಿಸಿ, ಅವರ ಜೀವನದ ಕೊನೆಯ ಆಸೆಯೇನಿತ್ತು ? ಎಂಬುದನ್ನು ತಿಳಿಯಬಯಸಿದರು. ತಮ್ಮ 'ನಲದಮಯಂತಿ' ನಾಟಕವನ್ನು ರಂಗದ ಮೇಲೆ ಪ್ರಯೋಗಿಸಲಿಕ್ಕೆ ಆಗದೆ ತೀರಿಕೊಂಡ ಅತೃಪ್ತಿಯನ್ನು ಅವರ ಆತ್ಮ ವ್ಯಕ್ತಪಡಿಸಿತು. ಆಗ ಜಿ. ಬಿ. ಜೋಶಿಯವರು ತಿಂಗಳು ಗಟ್ಟಲೆ ಬಾಗಲಕೋಟೆಯ ಪರ್ವತಿಯವರ ಮನೆಯಲ್ಲಿ ನಾಟಕದ ರಿಹರ್ಸಲ್ ಮಾಡಿಸಿ ಬಾಗಲಕೋಟೆಯಲ್ಲಿ “ನಲದಮಯಂತಿ'ಯನ್ನು ಪ್ರದರ್ಶಿಸಿಯೇ ಬಿಟ್ಟರು. ಈ ನಾಟಕದಲ್ಲಿ ನಟರಾಗಿದ್ದುದಲ್ಲದೇ, ಸಂಗೀತ ಸಂಯೋಜನೆ ಮಾಡಿದವರು ಪಂಡಿತ ಭೀಮಸೇನ ಜೋಶಿ. ಆಗಿನದು 'ಸಮಗ್ರ ಸಂಗೀತ ನಾಟಕ'ಗಳ ಕಾಲ. ಈ ನಾಟಕದಲ್ಲಿ 40 ಹಾಡುಗಳಿದ್ದವು. ಬಹುತೇಕ ಎಲ್ಲ ನಟರಿಗೂ ಒಂದಾದರೂ ಹಾಡು ಇತ್ತು. ಬಾಗಲಕೋಟೆಯ ಜನರಿಗೆ ಒಂದು ಅಭೂತಪೂರ್ವ ಅನುಭವ ಇದಾಗಿದೆ ಎಂದು ವಿಶ್ಲೇಷಿಸಿದ್ದಾರೆ.
©2024 Book Brahma Private Limited.