ಕಾತಚಿ ಸಮಗ್ರ ಕಥಾ ಸಂಪುಟ

Author : ಕಾ.ತ.ಚಿಕ್ಕಣ್ಣ

Pages 612

₹ 650.00




Year of Publication: 2023
Published by: ಕಂಠೀರವ ಪ್ರಕಾಶನ
Address: #208,ಕಿಂಗ್ಸ್ ಅಂಡ್ ಕ್ವೀನ್ಸ್ ಅಪಾರ್ಟ್‌ಮೆಂಟ್, ಚುಂಚಘಟ್ಟ ಮುಖ್ಯರಸ್ತೆ, ಕೋಣನಕುಂಟೆ ಬೆಂಗಳೂರು- 560062
Phone: 9448091191

Synopsys

‘ಕಾತಚಿ ಸಮಗ್ರ ಕಥಾ ಸಂಪುಟ’ ಕೃತಿಯು ಕಾತ ಚಿಕ್ಕಣ್ಣ ಅವರ ಸಮಗ್ರ ಕಥಾ ಸಂಕಲನವಾಗಿದೆ. ಈ ಸಮಗ್ರ ಸಂಪುಟದಲ್ಲಿ ‘ಬಿಳಲು ಬಿಟ್ಟಬದುಕು’, ‘ಅಗಾಂತರ’, ‘ಒಡಲುಮರಿ’, ‘ಮನಸು ಮುಗಿಲು’, ‘ವಾಸನಾಮಯ ಬದುಕಿನ ಆಚೆ ಈಚೆ’, ‘ಮೋಡ ನೆರಳನಿರಾಳ’ ಮತ್ತು ‘ಮಾಗಿ ಕೋಗಿಲೆಯ ಮೌನ’ ಸೇರಿದಂತೆ ಎಂಟು ಕಥಾ ಸಂಕಲನಗಳ ಒಟ್ಟು 75 ಕತೆಗಳಿವೆ. ತೀರ ಸಾಮಾನ್ಯವಾದುದನ್ನು ಕಥೆ ಮಾಡುವಂತಹ ಕಲೆ ಕತೆಗಾರರಿಗೆ ಸಿದ್ದಿಸಿದೆ ಎಂಬುವುದನ್ನು ಇಲ್ಲಿನ ಕತೆಗಳ ಮುಖೇನ ಕಾಣಬಹುದು. ಹಳ್ಳಿಯ ಸೊಗಡಿನಿಂದ ಹಿಡಿದು ಪಟ್ಟಣದ ದೈನಂದಿನ ಬದುಕಿನ ಕುರಿತಂತಹ ಕತೆಗಳು ಇಲ್ಲಿ ಪಕ್ವತೆಯನ್ನು ಪಡೆದಿದ್ದು, ಕಥಾ ವಸ್ತುಗಳು ಭಿನ್ನವಾಗಿ ಮೂಡಿಬಂದಿದೆ. ಕತೆಗಾರ ಕೃತಿಯಲ್ಲಿ ನಿನ್ನೆಯ ಜಗತ್ತಿನ ಪ್ರಾಮುಖ್ಯತೆಯನ್ನು ಕೂಡ ಕಥನ ರೂಪದಲ್ಲಿ ಪ್ರಮುಖವೆಂದು ತಿಳಿಸಿದ್ದಾರೆ. ಅವರೇ ಇಲ್ಲಿ ಹೇಳುವಂತೆ; ಪ್ರಾಯಃ ಇವತ್ತು ನಿಂತು ನಿನ್ನೆಗಳತ್ತ ಹಿಂದಿರುಗಿ ನೋಡಿದರೆ, ನನ್ನ ಕಥಾ ಜಗತ್ತು ಕಾಳಮ್ಮನ ಕೊಪ್ಪಲು, ಭಾವ ಜಗತ್ತು ಬಾಲ್ಯ ಎಂದೆನ್ನಿಸುತ್ತದೆ. ಬದುಕಿನ ಎಲ್ಲ ರಂಗದ ಅನುಭವಗಳನ್ನು ಅಥವಾ ಘಟನೆಯೊಂದನ್ನು ಸುಲಭವಾಗಿ ಒಳಗೊಳ್ಳುವಂಥ, ಹೇಳುವಂಥ, ಸರಳತೆ ಕಥಾ ಪ್ರಕಾರಕ್ಕೆ ಇರುವುದು ದಿಟ. ಇದು ಕಾರಣವಾಗಿಯೇ ನಮ್ಮಲ್ಲಿ ಕತೆಗಳ ಸಮೃದ್ಧ ಸೃಷ್ಟಿಗೆ ಕಾರಣವಿರಬಹುದು ಎಂದು ತಿಳಿಸಿದ್ದಾರೆ. 

 

About the Author

ಕಾ.ತ.ಚಿಕ್ಕಣ್ಣ
(30 May 1952)

ಕತೆಗಾರ-ಕಾದಂಬರಿಕಾರ ಕಾ.ತ. ಚಿಕ್ಕಣ್ಣ ಅವರು ಮೂಲತಃ ಮೈಸೂರು ಜಿಲ್ಲೆಯ ಕಾಳಮ್ಮನವರ ಕೊಪ್ಪಲು ಗ್ರಾಮದವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾಗಿ ನಿವೃತ್ತರಾಗಿರುವ ಚಿಕ್ಕಣ್ಣ ಅವರು ಸಂತಕವಿ ರಾಷ್ಟ್ರೀಯ ಅಧ್ಯಯನ ಮತ್ತು ಸಂಶೋಧನ ಸಂಸ್ಥೆಯ ಸಂಚಾಲಕರು. ನಾಲ್ಕು ಕಥಾಸಂಕಲನ, ಮೂರು ಕಾದಂಬರಿ ರಚಿಸಿದ್ದಾರೆ, ’ಮುಂಜಾವು’ ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ಬಂದಿದೆ. ಅವರ ’ವಧೂಟಿ’ ನಾಟಕಕ್ಕೆ ಆರ್ಯಭಟ ಪ್ರಶಸ್ತಿ ಲಭಿಸಿದೆ.  ಹಲವು ಸಮಿತಿಗಳ ಸದಸ್ಯ ಕಾರ್ಯದರ್ಶಿ, ಸಂಚಾಲಕರಾಗಿ ಕಾರ್ಯನಿರ್ವಹಿಸಿರುವ ಅವರು ಪಠ್ಯ ಪುಸ್ತಕ ರಚನಾ ಸಮಿತಿಯ ಸದಸ್ಯರಾಗಿದ್ದರು.  ಬಿಳಲು ಬಿಟ್ಟ ಬದುಕು, ಒಡಲುರಿ, ವಾಸನಾಮಯ ಬದುಕಿನ ಆಚೆ ಈಚೆ, ಮನಸ್ಸು ...

READ MORE

Related Books