ಲೇಖಕ ಜಿ.ಎಂ. ಕೃಷ್ಣಮೂರ್ತಿ ಅವರ ಕೃತಿ-ಯಶಸ್ಸಿನ ಮೆಟ್ಟಿಲುಗಳು. ಯಶಸ್ಸು ಎಂಬುದು ಸಿದ್ಧ ವಸ್ತುವಲ್ಲ; ಅದನ್ನು ಪ್ರಯಾಸಪಟ್ಟು, ಬುದ್ದಿವಂತಿಕೆಯನ್ನು ಮೆರೆದು ಪಡೆದುಕೊಳ್ಳಬೇಕಾದದ್ದು. ಯಶಸ್ಸು ಸಿಗಬೇಕಾದರೆ ಅದಕ್ಕೆ ಮೂಲ ಎಂಬುದು ಶ್ರಮ. ಪ್ರಾಮಾಣಿಕ ಮನಸ್ಸು ಮಾತ್ರ ಯಶಸ್ಸು ಪಡೆಯುತ್ತದೆ. ಒಂದಲ್ಲ ಹತ್ತು ಬಾರಿ ಸೋಲನ್ನು ಅನುಭವಿಸಿದರೂ ಮತ್ತೇ ಮತ್ತೆ ಪ್ರಯತ್ನ ಮಾಡಿದವರಿಗೆ ಮಾತ್ರ ಯಶಸ್ಸು ಸಿಗುತ್ತದೆ. ಆದ್ದರಿಂದ, ಪ್ರಯತ್ನಶೀಲರಿಗೆ ಮಾತ್ರ ಯಶಸ್ಸು ಇದೆ. ಸೋಮಾರಿಗೆ ಅಲ್ಲ. ಸದಾ ಗೆಲುವು ಬಯಸುವುದು ಸರಿಯಲ್ಲ. ಏಕೆಂದರೆ, ಸೋಲು ನಮಗೆ ಗೆಲುವಿಗಿಂತ ಹೆಚ್ಚಿನದನ್ನು ಕಲಿಸಿಕೊಡುತ್ತದೆ. ಯಶಸ್ಸಿಗೆ ಅಡ್ಡ ಮಾರ್ಗಗಳಿಲ್ಲ. ಹಂತ ಹಂತವಾಗಿ ಮೇಲೇರಿದರೆ ಮಾತ್ರ ಯಶಸ್ಸು ಎನ್ನಬಹುದು. ಅಡ್ಡದಾರಿಯಲ್ಲಿ ಹೋದರೆ ಆ ಯಶಸ್ಸು ಶಾಶ್ವತವಲ್ಲ. ಇಂತಹ ಸಲಹೆ-ಸೂಚನೆ-ಎಚ್ಚರಿಕೆಗಳನ್ನು ಒಳಗೊಂಡ ಪ್ರೇರಣಾತ್ಮಕ ಕೃತಿ ಇದು.
©2024 Book Brahma Private Limited.