ಅಮೆರಿಕಾದ ಪ್ರಖ್ಯಾತ ಲೇಖಕ-ತತ್ವಶಾಸ್ತ್ರಜ್ಞ ನೆಪೋಲಿಯನ್ ಹಿಲ್ ಅವರ ಥಿಂಕ್ ಆಂಡ್ ಗ್ರೋ ರಿಚ್’ ಎಂಬ ಆಂಗ್ಲ ಕೃತಿಯನ್ನು ಲೇಖಕ ಟಿ.ಎನ್. ಜಯಕೃಷ್ಣ ಅವರರು ಕನ್ನಡಕ್ಕೆ ಅನುವಾದಿಸಿದ ಕೃತಿ-‘ಸಿರಿತನಕ್ಕೆ ಹದಿಮೂರೇ ಹೆಜ್ಜೆ.’ ಐಶ್ವರ್ಯವೇ ಸಿರಿವಂತಿಕೆಯಲ್ಲ. ಯಾವುದೇ ಬಗೆಯ ಸಿರಿವಂತಿಕೆ ಸಾಧಿಸಬೇಕಾದರೆ ಏನು ಮಾಡಬೇಕು, ಹೇಗೆ ಮಾಡಬೇಕು? ಎಂಬುದು ಮುಖ್ಯ. ಈ ಹಿನ್ನೆಲೆಯಲ್ಲಿ, ಮಹತ್ವದ ಸಲಹೆ ಸೂಚನೆಗಳನ್ನು ಈ ಕೃತಿ ನೀಡುತ್ತದೆ. ವೈಯಕ್ತಿಕ ಸಾಧನೆ ಮತ್ತು ಆರ್ಥಿಕ ಸ್ವಾವಲಂಬನೆಯ ದಾರಿ ತೋರುವ ಅತ್ಯಂತ ಪ್ರಭಾವಿ ಕೃತಿ ಇದು. ಮಹಾನ್ ಸಾಧಕರ ಸಾಧನೆಗಳನ್ನು, ಬದುಕಿನ ಸಾರ್ಥಕತೆಯನ್ನು, ಯಶಸ್ಸಿನ ಅಂಶಗಳನ್ನೂ ಹೇಳುತ್ತದೆ. ಹಣ ಸಂಪಾದನೆಯ ರಹಸ್ಯ ಮೂಲಕ ಜೀವನ ರಹಸ್ಯವನ್ನೂ ಒಟ್ಟು 13 ಸೂತ್ರಗಳ ಮೂಲಕ ತಿಳಿಸುವ ಪ್ರಯತ್ನ ಈ ಕೃತಿಯಲ್ಲಿದೆ.
©2024 Book Brahma Private Limited.