ಲೇಖಕ ರನ್ನರಾಜ ಅವರ ಕೃತಿ-ಅಪ್ಪನೆಂದರೆ ದೇವರಲ್ಲ; ಅದರಾಚೆ ಇನ್ನೇನೋ..! ಭಾವನಾತ್ಮಕ ನೆಲೆಯಲ್ಲಿ ಅಪ್ಪನೆಂದರೆ ದೇವರ ಸಮಾನ ಎಂದೇ ತಿಳಿಯುತ್ತೇವೆ. ತಾಯಿ-ತಂದೆ-ಅತಿಥಿ - ಈ ಮೂವರು ದೇವರ ಸಮಾನ ಎಂಬುದು ಸನಾತನ ಧರ್ಮ ಹೇಳುತ್ತದೆ. ಈ ರೀತಿಯ ಶಿಕ್ಷಣದ ಪರಿಣಾಮ, ತಂದೆ ದೇವರೆಂದು ಭಾವಿಸಿ, ಆತನ ಪ್ರತಿ ವಿಚಾರ-ಭಾವ ಹಾಗೂ ವರ್ತನೆಗಳನ್ನು ಅನುಸರಿಸಬೇಕು ಎಂದು ನಮ್ಮ ಮನಸ್ಸು ನಂಬಿರುತ್ತದೆ. ಅದು ಮೌಢ್ಯವಾಗುತ್ತದೆ ಎಂಬ ವೈಚಾರಿಕ ನೆಲೆಯಲ್ಲಿ ಗ್ರಹಿಸುವುದೇ ಇಲ್ಲ. ಅಪ್ಪನೂ ಒಬ್ಬ ವ್ಯಕ್ತಿ. ತನ್ನ ಮಕ್ಕಳ ಭವಿಷ್ಯತ್ತಿನ ವಾರಸುದಾರ. ತನ್ನ ಕರ್ತವ್ಯ ನಿರ್ವಹಿಸುತ್ತಾನೆ. ಹೀಗಾಗಿ, ಅಪ್ಪ ದೇವರಲ್ಲ; ಅದರಾಚೆ ಇನ್ನೇನೋ..ಸಾಧ್ಯವಾದರೆ ದೇವರಿಗಿಂತಲೂ ದೊಡ್ಡವನೂ ಎಂದೋ, ತನ್ನ ಮಿತಿಯಲ್ಲಿ ಮಕ್ಕಳಿಗೆ ಆಸರೆ ನೀಡುವ ವ್ಯಕ್ತಿ ಎಂದೋ ಪರಿಗಣಿಸುವ ಸಾಧ್ಯತೆ ಅಥವಾ ಆ ನಿಟ್ಟಿನಲ್ಲಿ ವಿಚಾರವನ್ನು ಪ್ರೇರೇಪಿಸುವ ಕೃತಿ ಇದು.
©2024 Book Brahma Private Limited.