ಲೇಖಕ ಶಿವಕುಮಾರ ಡಿ. ಅವರ ’ಬ್ಯುಸಿನೆಸ್ ಸಕ್ಸಸ್ ಮಂತ್ರ’ ಕೃತಿಯು ಉದ್ಯಮ ಹಾಗೂ ವ್ಯವಹಾರ ಕುರಿತ ಪುಸ್ತಕವಾಗಿದೆ. ಇಲ್ಲಿರುವ ಬರವಣಿಗೆಯು ಯಶಸ್ವಿ ಉದ್ಯಮಿ ಆಗಬೇಕಾದವರಿಗೆ ಯಶಸ್ವಿಯಾಗಿಯೇ ಮಾರ್ಗದರ್ಶನ ನೀಡುವಂತಿದೆ. ಈ ಕೃತಿಗೆ ಬೆನ್ನುಡಿ ಬರೆದಿರುವ ವಿದ್ಯಾವಾಚಸ್ಪತಿ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ, ವ್ಯಾಪಾರ ವ್ಯಾವಹಾರದ ಜನ ಚಾಣಾಕ್ಷರಾಗಿರಬೇಕು. ಅಸಾಧೃವಾದುದನ್ನೇ ಚಿಂತಿಸುವುದರ ಜೊತೆಗೆ ಅದ್ಭುತವಾದುದನ್ನು ಚಿಂತಿಸಬೇಕು . ಮಹತ್ತರವಾದುದನ್ನು ಚಿಂತಿಸಬೇಕು ಹಾಗೂ ಮಹತ್ತರವಾದುದನ್ನು ಸಾಧಿಸುವ ಛಲದಿಂದ ವ್ಯವಹಾರಕ್ಕೆ ಧುಮುಕಬೇಕು, ಈಸಬೇಕು, ಇದ್ದು ಜೈಸಬೇಕು, ಸೋಮಾರಿತನ, ಅಲಸ್ಯ ವ್ಯಾಮೋಹ, ಅಲ್ಪತೃಪ್ತಿ ಮತ್ತು ಭಯಗಳಿಂದ ಉದ್ಯಮಿಗಳು ಹೊರಬರಬೇಕು. ಬ್ಯುಸಿನೆಸ್ ಎಂದರೆ ರಣರಂಗ , ಉದ್ಯಮಿ ಧೀರನಂತೆ ಎದ್ದುನಿಂತು ರಣೋತ್ಯಾಹದಿಂದ ಮುಂದೆಮುಂದೆ ಸಾಗಬೇಕು. ಪ್ರಪಂಚ ಆತ್ಮವಿಶ್ವಾಸವಿರಬೇಕು. ಅಪಾರ ಉತ್ಯಾಹವಿರಬೇಕು ಸದಾ ದುಡಿಯುವ ಕೈಗಳು, ಕ್ರಿಯಾಶೀಲ ಮನಸ್ಸು, ಎಲ್ಲರಿಗೂ ಸ್ಪಂದಿಸಬಲ್ಲ ಹೃದಯವಿರುವ ಉದ್ಯಮಿ ಯಶಸ್ಸು ಶ್ರೇಯಸ್ಸು ಎರಡನ್ನೂ ಗಳಿಸುತ್ತಾನೆ ಎನ್ನುವ ಹಲವು ಸ್ಪೂರ್ತಿದಾಯಕ ಮಾತುಗಳು ಇಲ್ಲಿವೆ. ನಿರಂತರವಾಗಿ ಬೆಳೆದು ವಿಕಸನವಾಗುವ ಯಶಸ್ಸಿನ ಮಂತ್ರವನ್ನು ಉದ್ಯಮಿಗಳಿಗೆ ಶಿವಕುಮಾರ ಡಿ. ಅವರು ಈ ಕೃತಿಯಲ್ಲಿ ಬಿಚ್ಚಿಟ್ಟಿದ್ದಾರೆ. ಪಾತ್ರಗಳನ್ನು ಸಂಸ್ಥೆಯನ್ನು ಯಶಸ್ಸಿನಿಂದ ಯಶಸ್ಸಿನತ್ತ ವಿಶಿಷ್ಠವಾಗಿ ಕರೆದೊಯ್ಯುವ ತಂತ್ರಗಳನ್ನು ಈ ಪುಸ್ತಕದಲ್ಲಿ ಲೇಖಕರು ನೀಡುವಲ್ಲಿ ಸಫಲವಾಗಿದ್ದಾರೆ’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.