ಇದು ನವ ಪೀಳಿಗೆಗೆಂದು ಆರಂಭವಾಗಿರುವ 'ಜೀವನ ವಿಕಸನ ಮಾಲೆ': ಪ್ರೌಢರಿಗೂ ಪ್ರಬುದ್ಧರಿಗೂ ತಲುಪುವ ಆಶಯದ್ದು, ಬಹಳಷ್ಟು ಬದುಕು ಕಂಡ ಹಲವು ರಂಗಗಳ ತಜ್ಞರು ಈ ಮಾಲೆಗೆ ಬರೆದಿರುತ್ತಾರೆ. ಸಕಾರಾತ್ಮಕ ಚಿಂತನೆ, ಆರೋಗ್ಯಕರ ಸ್ವಯಂ ನಂಬುಗೆ, ಅಹಂಕಾರವಲ್ಲದ ಆತ್ಮವಿಶ್ವಾಸ, ಆತ್ಮಾಭಿಮಾನ, ಜೀವನ ಕೌಶಲದ ವಿಷಯಗಳು, ದೈಹಿಕ ಆರೋಗ್ಯ, ಮಾನಸಿಕ ಸ್ಥೈರ್ಯ, ನೈತಿಕ ಬಲ ಈ ಎಲ್ಲ ವಿಷಯಗಳನ್ನು ಒಳಗೊಂಡು ಈ ಮಾಲೆ ಹೊರಬಂದಿದೆ. ಇದು ಜೀವನ ವಿಕಸನ ಮಾಲೆ: • ಜೀವನ ಕೌಶಲಗಳ ಸ್ಫೂರ್ತಿಯ ಕತೆಗಳನ್ನು, ಸರಳ ಭಾಷೆಯಲ್ಲಿ ತರುವ ಪ್ರಯತ್ನದ್ದು. • ಮರೆತ ಜೀವನ ಮೌಲ್ಯಗಳನ್ನು, ಅರಿತು ನಡೆಯುವ ಆಶಯದ್ದು. • ಅರಿವು-ಅಳವಡಿಕೆಯ ನಡುವಿನ ಅಂತರವನ್ನು ಕುಗ್ಗಿಸುವ ಲಕ್ಷ್ಮದ್ದು, # ಡಿಜಿಟಲ್ ನಡೆಯ ಯುಗದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುವ ಹಂಬಲವ ಜೀವನ ವಿಕಸನ ಮಾಲೆ ಹೊಸಯುಗದ ಹೊಸ ಸವಾಲುಗಳನ್ನು ಉದ್ದೇಶಿಸುವ ನಮ್ಮ ಪ್ರಯತ್ನದ್ದು. ಈ ಪುಸ್ತಕದಲ್ಲಿ ಹಾದಿಯ ಹಣತೆಗಳಾಗಿ ಇತರರ ಬಾಳನ್ನು ಹಸನು ಮಾಡಿದ ಅನುಕರಣೀಯರ ವ್ಯಕ್ತಿಚಿತ್ರಗಳಿವೆ, ಪ್ರಸಂಗಗಳಿವೆ. ಹಿಂದಿನ ಮರೆತ ಕತೆಗಳು, ಇಂದಿನ ಕಾಲಕ್ಕೂ ಸರಿ ಎನಿಸುವ ಬರಹಗಳೂ ಇಲ್ಲಿ ಸಂಗ್ರಹವಾಗಿವೆ. ಸಂವೇದನಾಶೀಲ ಬರಹಗಾರರಾದ ಎಚ್.ಎನ್. ಗೀತಾ ಅವರು ಈ ಸರಣಿಯ ಮೂರನೇ ಪುಸ್ತಕವಾದ 'ಹಾದಿಯ ಹಣತೆಗಳು' ಸಂಕಲನಗಳನ್ನು ಸಂಪಾದಿಸಿ ಕೊಟ್ಟಿದ್ದಾರೆ. ತಮ್ಮ ಸಮಾಜಮುಖಿ ಒಡನಾಟಗಳಲ್ಲಿ ಇತರರ ನೋವುಗಳಿಗೆ ಸದಾ ಸ್ಪಂದಿಸುವ ಎಚ್.ಎನ್. ಗೀತಾ ಅವರು ಈ ಸಂಕಲನಗಳಲ್ಲಿಯ ಬಹುಪಾಲು ಲೇಖನಗಳನ್ನು ಸ್ವತಃ ಬರೆದಿರುತ್ತಾರೆ. ಸಕರಾತ್ಮಕ ವ್ಯಕ್ತಿಗಳ ಸ್ಫೂರ್ತಿಯ ಕತೆಗಳನ್ನು, ಬದುಕಿಗೆ ಮಾರ್ಗದರ್ಶನವಾಗುವ ಜೀವನ ಮೌಲ್ಯಗಳನ್ನು ಆಯ್ದು ನೀಡಿದ್ದಾರೆ. ಇವರ ಮೂರು ಅನುವಾದಿತ ಕೃತಿಗಳು 'ಬಹುರೂಪಿ ಗಾಂಧಿ', 'ಅಮ್ಮನಿಗೆ ಹಜ್ ಬಯಕೆ' (ಇಂಡೋನೇಶಿಯಾದ ದಿಟ್ಟ ಮಹಿಳೆಯರ ಸಹಜ ಕಥೆಗಳು) ಹಾಗೂ 'ಉಜ್ವಲ ಕಿಡಿಗಳು' ನವಕರ್ನಾಟಕದಿಂದ ಪ್ರಕಟವಾಗಿವೆ.
©2024 Book Brahma Private Limited.