ಶಿವ್ ಖೇರಾ ಅವರ You can Win ಕೃತಿಯನ್ನು ಬ್ಲ್ಯೂಮ್ಸ್ ಬರಿ ಇಂಡಿಯಾ ಸಂಸ್ಥೆಯು ಪ್ರಕಟಿಸಿದ ಕನ್ನಡ ಕೃತಿ-ಯೂ ಕೆನ್ ವಿನ್. ಈ ಕೃತಿಯು ಯಶಸ್ಸಿಗೆ ಬೇಕಾದ ಸಾಧನಗಳ ವಿವರ ನೀಡುತ್ತದೆ. ಯಶಸ್ವಿ ಹಾಗೂ ಅರ್ಥಪೂರ್ಣ ಜೀವನ ನಿರ್ಮಿಸಿಕೊಳ್ಳಲು ನೀಲನಕ್ಷೆಯನ್ನುಪೂರೈಸುತ್ತದೆ. ಯಶಸ್ಸನ್ನು ಸಾಧಿಸಲು ಬೇಕಾಗುವ ಸಾಮಗ್ರಿಗಳು - ನೀವು ಪಾಲಿಸಬೇಕಾದ ನೀತಿ, ನಿಯಮಗಳು ಹಾಗೂ ಅವುಗಳನ್ನು ಬೆರೆಸುವ ವಿಧಾನಗಳನ್ನು ತಿಳಿಸುತ್ತದೆ. ಯಾವುದು ಎಷ್ಟು ಪ್ರಮಾಣದಲ್ಲಿರಬೇಕೆಂಬುದನ್ನು ವಿವರಿಸುತ್ತದೆ. ಒಂದು ಅರ್ಥದಲ್ಲಿ ಈ ಕೃತಿಯು ಒಂದು ಮಾರ್ಗದರ್ಶಿ.
©2024 Book Brahma Private Limited.