ಲೇಖಕ ರನ್ನರಾಜ ಅವರ ಕೃತಿ-ದುಡ್ಡು ಪ್ಲಸ್ ಮೈಂಡು, ಬರೀ ದುಡ್ಡು ಇದ್ದರೆ ಸಾಧನೆ ಅಸಾಧ್ಯ. ಜೊತೆಗೆ ಆ ದುಡ್ಡನ್ನು ಹೇಗೆ ಬಳಸಿಕೊಳ್ಳಬೇಕು ಎಂಬ ಸಾಮಾನ್ಯ ಜ್ಞಾನ ಬೇಕು. ಅದಿಲ್ಲದಿದ್ದರೆ, ದುಡ್ಡು ಎಷ್ಟಿದ್ದರೂ ವ್ಯರ್ಥ. ಕೇವಲ ಹಣದ ಪರಿಕಲ್ಪನೆ ಇದ್ದು, ದುಡ್ಡು ಇಲ್ಲದಿದ್ದರೂ ವ್ಯರ್ಥವೆ. ಕೆಲವೊಂದು ಸಲ, ಸಾಮಾನ್ಯ ಜ್ಞಾನವಿದ್ದು, ಇರುವ ಸ್ವಲ್ಪ ಹಣದಲ್ಲೇ ಹೆಚ್ಚಿನ ಹಣವನ್ನು ಸಂಪಾದಿಸಲೂ ಬಹುದು. ದುಡ್ಡು ಮತ್ತು ಅದನ್ನು ಬಳಸಿಕೊಳ್ಳುವ ಮನಸ್ಸು-ಜಾಣ್ಮೆ-ಈ ಎರಡರ ಸಂಬಂಧಗಳು ಸ್ವರೂಪ, ಅವು ಎಲ್ಲಿಯವರೆಗೆ ಕೂಡಿ ಇರುತ್ತವೆ.ಯಾಕೆ ಬೇರೆ ಬೇರೆಯಾಗಿ ದಿವಾಳಿಯತ್ತ ಹೆಜ್ಜೆ ಹಾಕುತ್ತವೆ. ಈ ಎರಡನ್ನೂ ಹೇಗೆ ನಿರ್ವಹಿಸಿಕೊಂಡು ಹೋಗಬೇಕು ಎಂಬಿತ್ಯಾದಿ ಅಂಶಗಳತ್ತ ಗಮನ ಸೆಳೆಯುವ ಹಾಗೂ ಪ್ರೇರಣಾತ್ಮಕ ಬರಹದ ಪ್ರಯತ್ನವೇ ಈ ಕೃತಿಯ ಹೆಚ್ಚುಗಾರಿಕೆ.
©2025 Book Brahma Private Limited.