ಲೇಖಕ-ಚಿಂತಕ-ಮನೋಚಿಕಿತ್ಸಕ ಡಾ. ಬಿ.ವಿ. ಪಟ್ಟಾಭಿರಾಮ್ ಅವರು ತೆಲುಗು ಭಾಷೆಯಲ್ಲಿ ಬರೆದಿದ್ದು, ಲೇಖಕಿ ವಿನೋದಾ ಅವರು ಕನ್ನಡಕ್ಕೆ ಅನುವಾದಿಸಿದ ಕೃತಿ-ಕಷ್ಟಪಟ್ಟು ಕೆಲಸ ಮಾಡಬೇಡಿ; ಇಷ್ಟಪಟ್ಟು ಕೆಲಸ ಮಾಡಿ. ಇದು ಬದುಕಿನ ಎಲ್ಲ ಸಮಸ್ಯೆಗಳಿಗೆ ವಿಜಯ ಮಂತ್ರ ಮತ್ತು ಮಾಡುವ ಕೆಲಸವನ್ನು ಆನಂದದಿಂದ ಮಾಡಿ ಎನ್ನುವ ಉಪಶೀರ್ಷಿಕೆಗಳು ಕೃತಿಯ ಓದನ್ನು ಪ್ರೇರೇಪಿಸುತ್ತವೆ. ಮಾಡುವ ಕೆಲಸವನ್ನು ಬೇಸರದಿಂದ, ಅಸೂಯೆಯಿಂದ ಮಾಡಿದರೆ ಅದರಿಂದ ಸಮಯದ ವ್ಯರ್ಥವೂ, ಗುಣಮಟ್ಟದ ಕೊರತೆಯೂ ಆಗುತ್ತದೆ. ಅದೇ ಕೆಲಸವನ್ನು ಆನಂದದಿಂದ ಮಾಡಿದರೆ ಅದರ ಸೌಂದರ್ಯವೂ, ಗುಣಮಟ್ಟವೂ ಹೆಚ್ಚಿ ಎಲ್ಲರ ಮನವನ್ನು ಸೆಳೆಯುತ್ತದೆ. ಇಂತಹ ಮಾರ್ಗದರ್ಶಿ ಸೂತ್ರಗಳನ್ನು ಒಳಗೊಂಡಿರುವ ಈ ಕೃತಿಯು, ಗುರಿಸಾಧಿಸಲು ಹಿಡಿದ ಕೆಲಸ ಹೇಗೆ ಮಾಡಬೇಕು ಎಂಬುದನ್ನು ಸೂಚಿಸುತ್ತದೆ ಮತ್ತು ಆ ನಿಟ್ಟಿನಲ್ಲಿ ಓದುಗರು ಸಾಗುವಂತೆ ಪ್ರೇರೇಪಿಸುತ್ತದೆ.
©2025 Book Brahma Private Limited.