ಪಂಡಿತ ಶಿವನಂದಾ ಪಂಡಿತ ಅವರ ಕೃತಿಯಾಗಿದೆ. ಮಾನವ ಕುಲದ ಪ್ರತಿ ಸದಸ್ಯನಿಗೆ ಪ್ರತ್ಯೇಕವಾಗಿ ಬುದ್ಧಿವಂತಿಕೆಯನ್ನು ಕಲಿಸಲು ದೇವರಿಂದ ಸಾಧ್ಯವಿಲ್ಲ. ಆದ್ದರಿಂದಲೇ ಆತ ಪುಸ್ತಕಗಳನ್ನು ಸೃಷ್ಟಿಸಿದನು. ಕೋಟಿಗಟ್ಟಲೆ ಮೈಲುಗಳ ಪ್ರಯಾಣ ಒಂದು ಹೆಜ್ಜೆಯಿಂದ ಪ್ರಾರಂಭವಾಗುತ್ತದೆ. ಈ ಗ್ರಂಥವು ಚೆಲುವಾದ ಆದರ್ಶ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ, ಬೆಳೆಸಿಕೊಳ್ಳುವ, ಉಳಿಸಿಕೊಳ್ಳುವ ಪರಿಯನ್ನು ಉಪದೇಶಿಸುತ್ತದೆ. ಬಾಳಿನ ಬವಣೆಗಳನ್ನು ಎದುರಿಸುವ ಶಕ್ತಿಮಂತ್ರ ಇದರಲ್ಲಿದೆ. ಬದುಕೆಂಬ ಸಮರದಲ್ಲಿ ಗೆದ್ದು ಪಂಡಿತರಾಗುವುದು ಈ ಪುಸ್ತಕದ ಅಧ್ಯಯನದಿಂದ ಸುಲಭಸಾಧ್ಯ. ಪುಸ್ತಕದ ಪ್ರಸ್ತುತ ಶೀರ್ಷಿಕೆಯೂ ಅದಕ್ಕೆ ಪೂರಕವಾಗಿದೆ, ಪ್ರೇರಕವಾಗಿದೆ. ಈ ಎಲ್ಲಾ ಭರವಸೆಗಳ ಹಿನ್ನೆಲೆಯಲ್ಲಿ ‘ಪಂಡಿತ’ ಪುಸ್ತಕದ ಓದುವಿಕೆಯಿಂದ ಓದುಗರ ಬಾಳ್ವೆಯಲ್ಲಿ ಸಕಾರಾತ್ಮಕ ಪರಿವರ್ತನೆಗಳು ಸಂಭವಿಸಬಹುದು.
©2024 Book Brahma Private Limited.