‘ಸಾಮಾಜಿಕ ಉದ್ಯಮಶೀಲರ ಯಶಸ್ಸಿನ ಸೂತ್ರ ' ಕೃತಿಯನ್ನು ‘ಪರಿಹಾರಾತ್ಮಾಕ ಚಿಂತನೆ ಬೆಳೆಸಿಕೊಳ್ಳುವುದು ಹೇಗೆ’ ಎಂಬ ಉಪಶೀರ್ಷಿಕೆಯೊಡನೆ ಲೇಖಕ ವೆಂಕಟೇಶ್ ರಾಘವೇಂದ್ರ ಅವರು ರಚಿಸಿದ್ದಾರೆ. ಉದ್ಯಮಗಳು ಕುರಿತ ಲೇಖನಗಳ ಸಂಕಲನವಾಗಿದೆ. ಇಲ್ಲಿಯ ಹಲವು ಬರಹಗಳು ದಿನಪತ್ರಿಕೆಯ ಅಂಕಣ ರೂಪದಲ್ಲಿ ಪ್ರಕಟವಾಗಿವೆ. ಕೃತಿಗೆ ಪ್ರಸ್ತಾವನೆ ಬರೆದ ದೇಶ್ ದೇಶಪಾಂಡೆ ಅವರು, ‘ತಮ್ಮ ಬಿಡುವಿಲ್ಲದ ಬದುಕಿನ ನಡುವೆಯೂ ಬರವಣಿಗೆಗೆ, ಮುಖ್ಯವಾಗಿ ಸಾಮಾಜಿಕ ಉದ್ಯಮಶೀಲರ ಬಗ್ಗೆ ಬರೆಯಲು ಅವರು ಬಿಡುವು ಮಾಡಿಕೊಂಡಿದ್ದಕ್ಕೆ ಹೆಮ್ಮೆ ಎನ್ನಿಸುತ್ತದೆ. ಅದರಲ್ಲಂತೂ, ಅವರು ತಮ್ಮ ಮಾತೃಭಾಷೆ ಕನ್ನಡ ಮೂಲಕವೇ ಜಗತ್ತಿಗೆ ಮಾದರಿ ಎಂದು ಪರಿಗಣಿಸಲಾಗಿರುವ ಹಲವಾರು ಸಾಮಾಜಿಕ ಉದ್ಯಮಶೀಲರ ಯಶಸ್ಸನ್ನು ಸಾರಿದ್ದು ಗಮನಾರ್ಹ ಅಂಶ. ಯಾವುದೇ ಮಟ್ಟ ಅಥವಾ ಗಾತ್ರದಲ್ಲಿ ಯಾರೇ ಸಾಮಾಜಿಕ ಉದ್ಯಮಶೀಲ ಜಗತ್ತಿನಲ್ಲಿ ಕಾರ್ಯಪ್ರವೃತ್ತರಾದರೂ, ಅದರಿಂದ ಸಮಾಜಕ್ಕೆ ಒಂದಿಷ್ಟು ಒಳಿತಾಗುತ್ತದೆ. ಪ್ರಪಂಚದ ಯಾವುದಾದರೂ ಒಂದು ಭಾಗದಲ್ಲಿ ಸಾಮಾಜಿಕ ಸಮಸ್ಯೆಗಳಿಗೆ ಒಂದಿಷ್ಟು ಪರಿಹಾರ ಸಿಗುತ್ತದೆ. ಭರವಸೆಯ ಸೆಲೆ ಚಿಮ್ಮುತ್ತದೆ. ಅಂತಹ ಸೆಲೆಯನ್ನು ಅಕ್ಷರಗಳ ಮೂಲಕ ಜಗತ್ತಿಗೆ ತಿಳಿಸಿ ಬದಲಾವಣೆಯ ಗತಿಯನ್ನು ವೃದ್ದಿಸುತ್ತಿರುವ ವೆಂಕಿ ಅವರ ಪ್ರಯತ್ನ ಶ್ಲಾಘನೀಯ’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.