ಸದಾ ಸಂತೋಷ ಹೇಗೆ? ಎಂತು?

Author : ಖಾದ್ರಿ ಎಸ್. ಅಚ್ಯುತನ್

Pages 184

₹ 110.00




Year of Publication: 2010
Published by: ವಸಂತ ಪ್ರಕಾಶನ
Address: #360, 10ನೇ ಮುಖ್ಯ ರಸ್ತೆ, ಬಿ ಮೈನ್ ರೋಡ್, ಜಯನಗರ ಈಸ್ಟ್, ಜಯನಗರ, ಬೆಂಗಳೂರು - 560011

Synopsys

‘ಸದಾ ಸಂತೋಷ ಹೇಗೆ? ಎಂತು?’ ಕೃತಿಯ ಮೂಲ ಲೇಖಕರು ಎಂ. ಕೆ ಗುಪ್ತ. ಲೇಖಕ ಹಾಗೂ ಪತ್ರಕರ್ತ ಖಾದ್ರಿ ಎಸ್. ಅಚ್ಯುತ್ತನ್ ಅವರು ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ತಲ್ಲಣ-ತಳಮಳ-ಒತ್ತಡ ನೀಗಿಸುವ, ನಮ್ಮ ದಿನನಿತ್ಯದ ಬದುಕಿನಲ್ಲಿ ನಡೆಯುವಂತಹ ವಿಚಾರಗಳ ಕುರಿತು ಮಾಹಿತಿಯನ್ನು ನೀಡುತ್ತಾ, ಹಲವು ಸಮಸ್ಯೆಗಳ ಗೋಜಲು, ಬದುಕಿನ ಸಣ್ಣ ಸಣ್ಣ ಕ್ಷಣಗಳನ್ನು ಕೂಡ ಅನುಭವಿಸುವ ವ್ಯವಧಾನವನ್ನು ವಿವರಿಸುತ್ತದೆ. ಎಲ್ಲರಿಗೂ ಒಂದಲ್ಲ ಒಂದು ಬಗೆಯ ಅವಸರ ಧಾವಂತ ಇರುತ್ತದೆ. ಸದಾ ಸಂತೋಷ : ಹೇಗೆ? ಎಂತು?, ಸಂತೋಷವೆಂದರೇನು , ಅದನ್ನು ಪಡೆಯುವುದು ಹೇಗೆ ಎಂಬ ಪ್ರಶ್ನೆಗಳಿಗೆ ಕೃತಿಯಲ್ಲಿ ಅನೇಕಾನೇಕ ಸೂತ್ರಪಾಠಗಳಿವೆ. ಇವು ಓದುಗರಿಗೆ ಬೇರೆ ಬೇರೆ ವಿಷಯದಲ್ಲಿ ಸೂಕ್ಷ್ಮ ಒಳನೋಟಗಳುಳ್ಳ ಮಾರ್ಗದರ್ಶನ ನೀಡಬಲ್ಲವು. ಲೇಖಕರು ತಮ್ಮೊಳಗಿನ ವಿಚಾರವನ್ನು ಕೆಲವೇ ಕೆಲವು ಪುಟಗಳಲ್ಲಿ ಮನಮುಟ್ಟುವಂತೆ ಪ್ರಸ್ತುತಪಡಿಸಿದ್ದಾರೆ.

About the Author

ಖಾದ್ರಿ ಎಸ್. ಅಚ್ಯುತನ್
(18 January 1945 - 29 October 2017)

ಹಿರಿಯ ಪತ್ರಕರ್ತ, ಲೇಖಕ ಖಾದ್ರಿ ಎಸ್.ಅಚ್ಯುತನ್ ಮೂಲತಃ ಮಂಡ್ಯ ಜಿಲ್ಲೆಯ ಮೇಲುಕೋಟೆಯವರು. ಮೈಸೂರಿನಲ್ಲಿ ಪ್ರೌಢಶಾಲೆ, ಪದವಿ ವ್ಯಾಸಂಗ ಮುಗಿಸಿದ ಅವರು ಸಂಯುಕ್ತ ಕರ್ನಾಟಕ ದಿನ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ವೃತ್ತಿ ಆರಂಭಿಸಿದರು. ನಂತರ 1966ರಲ್ಲಿ ಕೇಂದ್ರ ಸಮಾಚಾರ ಮತ್ತು ಪ್ರಸಾರ ಖಾತೆಯಲ್ಲಿ ಸೇವೆಗೆ ನಿಯುಕ್ತಿಪಡೆದರು, ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಣೆ, ಧಾರವಾಡ, ಪೋರ್ಟ್ಭೇರ್‌ ಆಕಾಶವಾಣಿಗಳಲ್ಲಿ ಸುದ್ದಿ ಸಂಪಾದಕ; ಬೆಂಗಳೂರು ದೂರದರ್ಶನದಲ್ಲಿ ಮೊದಲಿಗೆ ಸುದ್ದಿ ಸಂಪಾದಕ, ಆಮೇಲೆ ಸುದ್ದಿ ನಿರ್ದೇಶಕ, ಕನ್ನಡ ಯೋಜನಾ ಪತ್ರಿಕೆ ಸುದ್ದಿ ಸಂಪಾದಕ, ಸೆನ್ಸಾರ್ ಮಂಡಳಿ ಪ್ರಾದೇಶಿಕ ಅಧಿಕಾರಿ, ನಿವೃತ್ತಿ ನಂತರ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಬೋಧನೆಮಾಡಿದ್ದಾರೆ. ...

READ MORE

Related Books