ಅನಿವಾಸಿ ಭಾರತೀಯ ಲೇಖಕ ಡಾ. ದೀಪಕ್ ಚೋಪ್ರಾ ಅವರ ಕೃತಿ-‘ಮುಪ್ಪಾಗದ ದೇಹ;;; ಕಾಲಾತೀತ ಮನಸ್ಸು’. ‘ಜಾತಸ್ಯ ಮರುಣಂ ಧ್ರುವಂ’. ಹುಟ್ಟಿದ ಪ್ರತಿ ಜೀವಿಯೂ ಸಾಯಲೇಬೇಕು. ಸಾವನ್ನು ತಪ್ಪಿಸಿಕೊಳ್ಳಲಾಗದು. ಸಾವಿನ ಕುರಿತು ಚಿಂತಿಸುವುದಕ್ಕಿಂತ ಬದುಕಿನ ಔನ್ನತ್ಯದ ಬಗ್ಗೆ ಚಿಂತನೆ ನಡೆಸುವುದು ಒಳಿತು. ಈ ದೇಹ ಮುಪ್ಪಾಗುತ್ತದೆ. ಆದರೆ, ಮುಪ್ಪಾಗದಂತೆ ನೋಡಿಕೊಳ್ಳುವುದು ಒಂದು ಕಲೆ. ಬದುಕಿನ ಶಿಸ್ತು. ಮನಸ್ಸು ಸಹ ಸ್ವಭಾವದಲ್ಲಿ ಕಾಲಾತೀತವಾಗಿದೆ. ಅದನ್ನು ಸಂತಸದಲ್ಲಿಟ್ಟೇ ಹಿಗ್ಗಿಸುತ್ತಿರಬೇಕು. ಸಂಕುಚಿತಗೊಳಿಸುವಂತಿಲ್ಲ. ಈ ರೀತಿ ಬದುಕುವುದೂ ಒಂದು ಕಲೆ. ಇಂತಹ ಸಂಗತಿಗಳನ್ನು ಒಳಗೊಂಡ ಪ್ರೇರಣಾತ್ಮಕ ಬರಹಗಳ ಕೃತಿ ಇದು.
©2024 Book Brahma Private Limited.