ಚಿಂತಕ-ಲೇಖಕ-ಮನೋಚಿಕಿತ್ಸಕ ಡಾ. ಬಿ.ವಿ. ಪಟ್ಟಾಭಿರಾಮ್ ಅವರು ಮೂಲ ಇಂಗ್ಲಿಷಿನಲ್ಲಿ ಬರೆದ ಕೃತಿಯನ್ನು ಲೇಖಕ ಎಂ.ಎಲ್. ರಾಘವೇಂದ್ರರಾವ್ ಅವರು ಕನ್ನಡಕ್ಕೆ ಅನುವಾದಿಸಿದ ಕೃತಿ-ಜೀನಿಯಸ್ ನೀವೂ ಸಹ. ಹುಟ್ಟಿನಿಂದ ಯಾರೂ ಜೀನಿಯಸ್ ಅಲ್ಲ. ಸ್ವಯಂಪ್ರೇರಣೆ ಹಾಗೂ ಸ್ವಯಂಸಾಧನೆಯಿಂದ ಯಾರಾದರೂ ಜೀನಿಯಸ್ ಆಗಬಹುದು ಎಂಬ ಕೃತಿಯ ಶೀರ್ಷಿಕೆಯೊಂದಿಗೆ ನೀಡಿರುವ ಒಟ್ಟು ಸಾರಾಂಶವು ಕೃತಿಯ ವಿಷಯ ವಸ್ತುವಿನ ಅರ್ಥವಂತಿಕೆಯನ್ನು ಹೆಚ್ಚಿಸಿದೆ. ತತ್ವಜ್ಞಾನಿಗಳಾದ ಸಾಕ್ರಟಿಸ್, ಕೋಪರ್ನಿಕಸ್, ಕೌಟಿಲ್ಲ, ಎಡಿಸನ್, ಗ್ರಾಹಂಬೆಲ್, ಐನ್ ಸ್ಟಿನ್, ಸಿ.ವಿ. ರಾಮನ್, ಸ್ಟೀಫನ್ ಹಾಕಿಂಗ್, ಅಮೃತ ಸೇನ್ ಅವರ ಬುದ್ಧಿಮತ್ತೆಯೊಂದಿಗೆ ವಿಷಯವನ್ನು ತಳಕು ಹಾಕಿ ಅವರ ವಿಷಯವಾರು ಕ್ಷೇತ್ರಗಳಲ್ಲಿಯ ಸಾಧನೆಗಳನ್ನು ಒಂದೆಡೆ ಕಟ್ಟಿಕೊಟ್ಟಿದ್ದು ಈ ಕೃತಿಯ ಹೆಗ್ಗಳಿಕೆ. ಇಂತಹ ಬರಹಗಳ ಮೂಲಕ ‘ಪ್ರತಿಯೊಬ್ಬರಲ್ಲೂ ಸಾಮರ್ಥ್ಯಗಳು-ಶಕ್ಯತೆಗಳು ಇರುತ್ತವೆ. ಅವನ್ನು ಕಂಡುಕೊಳ್ಳುವ ಮೂಲಕ ಸಾಧಿಸಬೇಕು. ಸಾಧಕರಷ್ಟೇ ಸಾಧಿಸುತ್ತಾರೆ ಎಂಬ ಕೀಳರಿಮೆ ತೊರೆಯಬೇಕು ಎಂಬ ಪ್ರೇರಣಾತ್ಮಕ ಚಿಂತನೆಗಳಿರುವ ಬರಹಗಳನ್ನು ಈ ಕೃತಿ ಒಳಗೊಂಡಿದೆ.
©2025 Book Brahma Private Limited.