ಅಧ್ಯಾತ್ಮ ಗುರು ಖ್ಯಾತಿಯ ಸ್ವಾಮಿ ಸುಖಬೋಧಾನಂದ ಅವರ ಕೃತಿ-ಓ ಜೀವನವೇ ರಿಲ್ಯಾಕ್ಸ್ ಪ್ಲೀಸ್. ಜೀವನವು ಸದಾ ಒತ್ತಡದಿಂದಲೇ ಕೂಡಿರುತ್ತದೆ. ಕೆಲವೊಮ್ಮೆ ಈ ಒತ್ತಡಕ್ಕೆ ವ್ಯಕ್ತಿಯ ಮನಸ್ಥಿತಿಯೂ ಕಾರಣವಾಗಿರುತ್ತದೆ. ಕೆಲವೊಮ್ಮ ಸನ್ನಿವೇಶಗಳು ಮತ್ತು ಬಹುತೇಕ ವೇಳೆ ವ್ಯಕ್ತಿಯೇ ತನ್ನೊಳಗೆ ಒತ್ತಡಗಳ ಸೃಷ್ಟಿಗೆ ಕಾರಣನಾಗಿರುತ್ತಾನೆ. ಒಟ್ಟಿನಲ್ಲಿ ಒತ್ತಡಗಳು ಎದುರಾದಾಗ ಅವುಗಳನ್ನು ಹೇಗೆ ನಿಯಂತ್ರಿಸಬೇಕು. ಹೇಗೆ ನಿರ್ವಹಣೆ ಮಾಡಬೇಕು. ಅವುಗಳನ್ನು ಹೇಗೆ ಧನಾತ್ಮಕವಾಗಿ ಪರಿವರ್ತಿಸಿಕೊಳ್ಳಬೇಕು ಇತ್ಯಾದಿ ಅರಿವಿನ ಹಿನ್ನೆಲೆಯಲ್ಲಿ ಒತ್ತಡದ ಜೀವನವನ್ನು ನೆಮ್ಮದಿಯ ಜೀವನವಾಗಿಸುವ ಕಲೆಯನ್ನು ಈ ಕೃತಿಯಲ್ಲಿ ಚರ್ಚಿಸಲಾಗಿದೆ.
©2025 Book Brahma Private Limited.