ಲೇಖಕ ಅಡ್ಡೂರು ಕೃಷ್ಣರಾವ್ ಅವರ ಲೇಖನ ಕೃತಿ ʻಉಲ್ಲಾಸಕ್ಕೆ ದಾರಿ ನೂರುʼ. ಮನುಷ್ಯ ತಾನು ಸುಖವಾಗಿರಬೇಕೆಂದು ಬಯಸುತ್ತಾನೆ. ಆದರೆ ಉಲ್ಲಾಸದಿಂದ, ಚಟುವಟಿಕೆಯಿಂದ ಇರ ಬಯಸುವವರು ಕಡಿಮೆ. ಬದಲಾದ ಜೀವನ ಶೈಲಿಯಲ್ಲಿ ದಿನನಿತ್ಯ ಕಾಡುವ ಆತಂಕ, ಖಿನ್ನತೆ, ಸಂಕಟ, ನೋವು, ನಿರಾಶೆಗಳಿಂದ ಹೊರಬಂದು ಮನೋಲ್ಲಾಸದಿಂದ ಬದುಕಲು ಹಲವು ಮಾರ್ಗೋಪಾಯಗಳು ಈ ಪುಸ್ತಕದಲ್ಲಿದೆ. ಇವನ್ನು ಲೇಖಕರು ಸ್ವತಃ ಅಭ್ಯಾಸ ಮಾಡಿ ಕಂಡುಕೊಂಡದ್ದನ್ನು ಕೃತಿಯ ಮೂಲಕ ಪ್ರಸ್ತುತಪಡಿಸಿದ್ದಾರೆ.
©2025 Book Brahma Private Limited.