ಚಿಂತಕ-ಲೇಖಕ-ಮನೋಚಿಕಿತ್ಸಕ ಡಾ. ಬಿ.ವಿ. ಪಟ್ಟಾಭಿರಾಮ್ ಅವರು ಬರೆದ ಕೃತಿ-ಸೂತ್ರಧಾರರು. ಬದುಕಿನಲ್ಲಿ ಬರೀ ಪಾತ್ರಧಾರಿಗಳಾಗದೇ ಅಂದರೆ ಮತ್ತೊಬ್ಬರ ಕಣ್ಣಳತೆಯಲ್ಲಿ ನಡೆಯುವುದಕ್ಕಿಂತ ತಮ್ಮ ಬದುಕಿನ ಸೂತ್ರಧಾರಿಗಳು ತಾವೇ ಆಗಬೇಕು ಎಂಬುದು. ಇದು ಹೇಗೆ ಸಾಧ್ಯ ಎಂಬುದನ್ನು ಹತ್ತು ಹಲವು ಮಾರ್ಗದರ್ಶಿಗಳ ಮೂಲಕ ತೋರುವ ಕೃತಿ ಇದು. `ಕೋಟಿ ಜನರಲ್ಲಿ ಒಬ್ಬರಾಗುವುದಕ್ಕಿಂತ ಕೋಟಿಯಲ್ಲಿ ಒಬ್ಬರಾಗುವುದು ಶ್ರೇಷ್ಠ'. `ಪಾತ್ರಧಾರಿಗಳಾಗಿ ಉಳಿಯಬೇಡಿ; ಸೂತ್ರಧಾರಿಗಳಾಗಿರಿ' ಹೀಗೆ ಹತ್ತು ಹಲವು ಚುರುಕಾದ ಹಾಗೂ ಚಿಕ್ಕ ಚಿಕ್ಕ ವಾಕ್ಯಗಳೊಂದಿಗೆ ಓದಿಸಿಕೊಂಡು ಹೋಗುವ ಕೃತಿ ಇದು. ಪುರಾಣ ಹಾಗೂ ಚಾರಿತ್ರಿಕ ವ್ಯಕ್ತಿ-ಘಟನೆಗಳನ್ನು ಆಧರಿಸಿ ವ್ಯಕ್ತಿತ್ವ ವಿಕಸನದ ಸೂತ್ರಗಳನ್ನು ಮನದಟ್ಟು ಮಾಡಿಕೊಡುವ ಮೂಲಕ ಓದುಗರಲ್ಲಿ ಅವರ ಸಾಮರ್ಥ್ಯದ ಕುರಿತು ಆತ್ಮವಿಶ್ವಾಸ ಮೂಡುವಂತೆ ಮಾಡುತ್ತದೆ.
©2024 Book Brahma Private Limited.