ಲೇಖಕ ಕೆ.ಎಂ.ವಿಶ್ವನಾಥ ಮರತೂರ ಅವರ ಲೇಖನಗಳ ಸಂಕಲನ ‘ಮಕ್ಕಳು ಮೆಚ್ಚುವ ಶಿಕ್ಷಕರಾಗೋಣವೇ?’. ಸಚಿವರು ಎಸ್. ಸುರೇಶ್ ಕುಮಾರ್ ಮಾತ್ರವಲ್ಲದೆ ಕೆ.ಎ.ಎಸ್ ಅಧಿಕಾರಿ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಹಾಗೂ ಡಾ. ಶಾಲಿನಿ ರಜನೀಶ್ – ಐ.ಎ.ಎಸ್ ಅವರೂ ಸಹ ಈ ಕೃತಿಯಲ್ಲಿ ಮುನ್ನುಡಿ ಹಾಗೂ ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ.
ಮುನ್ನುಡಿಯ ಮಾತಿನಲ್ಲಿ ಡಾ. ಶಾಲಿನಿ ರಜನೀಶ್ ಅವರು ಹೇಳುವಂತೆ ,’ “ಮಕ್ಕಳು ಮೆಚ್ಚುವ ಶಿಕ್ಷಕರಾಗೋಣವೇ?” ಪುಸ್ತಕವು ಶಿಕ್ಷಣ ಕ್ಷೇತ್ರದಲ್ಲಿನ ಶಿಕ್ಷಕರು, ಮಕ್ಕಳು ಮತ್ತು ಪಾಲಕರನ್ನು ಪ್ರತಿಬಿಂಬಿಸುತ್ತದೆ. ಈ ಪುಸ್ತಕದಲ್ಲಿ ಲೇಖಕರು ಮನೆಯಂಬ ಪಾಠಶಾಲೆ, ಸರಕಾರಿ ಶಾಲೆಗಳ ಸಬಲೀಕರಣ, ಮಕ್ಕಳ ಪರೀಕ್ಷೆ ಮತ್ತು ಭಯ, ಸರಕಾರದ ಮದ್ಯಾನದ ಬಿಸಿಯೂಟ, ಮಕ್ಕಳಿಗೆ ಚಾರಣದ ಅವಶ್ಯಕತೆ, ಮಕ್ಕಳು ಮೆಚ್ಚುವ ಶಿಕ್ಷಕರಾಗಲು ಅರ್ಹತೆಗಳು, ಮಕ್ಕಳ ಗ್ರಂಥಾಲಯ, ಪಾಲಕರ ಕರ್ತವ್ಯಗಳನ್ನು ಹೀಗೆ ಶಿಕ್ಷಣದ ವಿವಿಧ ಪ್ರಕಾರಗಳಲ್ಲಿ ಧನಾತ್ಮಕ ದೃಷ್ಠಿ ಹಾಯಿಸುತ್ತಾರೆ. ಆದರ್ಶ ವಿದ್ಯಾರ್ಥಿಯಾಗಲು ಇರಬೇಕಾದ ಗುಣಗಳು. ದೈವ ದೇಗುಲದ ಜೊತೆಗೆ, ಜ್ಞಾನ ದೇಗುಲ ಕಟ್ಟೋಣವೇ? ಸಮಕಾಲೀನ ಸಂದರ್ಭದಲ್ಲಿ ಶಿಕ್ಷಕರಾಗುವುದೆಂದರೇನು? ನಮ್ಮ ಮಕ್ಕಳಿಗೆ ಪುಸ್ತಕಗಳನ್ನು ಮರು ಪರಿಚಯಿಸಲು ಇದು ಸಕಾಲ. ತೆರೆದ ಪುಸ್ತಕ ಪರೀಕ್ಷೆಗಳು, ಮಕ್ಕಳು ಮೆಚ್ಚುವ ಶಿಕ್ಷಕರಾಗೋಣವೇ? ಈ ಲೇಖನಗಳ ಮೂಲಕ ಶಿಕ್ಷಣ ಇಲಾಖೆಯ ಆಳ ಅಗಲಗಳನ್ನು ಲೇಖಕರು ತಮ್ಮ ಸ್ವಂತ ಅನುಭವದ ಮೂಲಕ ಪರಿಚಯಿಸುತ್ತಾರೆ’ ಎಂದಿದ್ದಾರೆ.
©2024 Book Brahma Private Limited.